News ಸಿನಿಮಾ

“ಪುಷ್ಪ” ಸಿನಿಮಾ 10 ಕೋಟಿ ಗಳಿಸಿದೆ, ಹಾಗೆಯೇ ಇತರ ಸಿನಿಮಾಗಳನ್ನೂ ಕನ್ನಡದಲ್ಲಿ ಡಬ್ ಮಾಡಿ, ಆ ಭಾಷೆಗೆ ಗೌರವ ಕೊಡಿ”; ಉಪೇಂದ್ರ !

ಸಿನಿಮಾ ಹಂಗಾಮ ,ನವೆಂಬರ್ 22 : ಪರಭಾಷಾ ಸಿನಿಮಾಗಳನ್ನು ಕನ್ನಡದಲ್ಲಿ ಡಬ್ ಮಾಡಿ ಬಿಡಬೇಕು ಎನ್ನುವ ಆಗ್ರಹ ಬಹಳ ದಿನಗಳಿಂದ ಕೇಳಿಬರ್ತಿದೆ. ಕೆಲವರು ಇವತ್ತಿಗೂ ಡಬ್ ಮಾಡಿ ಇಲ್ಲಿ ಸಿನಿಮಾ ಬಿಡುಗಡೆಗೆ ಹಿಂದೇಟು ಹಾಕುತ್ತಿದ್ದಾರೆ.

ಇನ್ನು ಪರಭಾಷಾ ಸಿನಿಮಾಗಳ ಬಿಡುಗಡೆ ವೇಳೆ ಚಿತ್ರಮಂದಿರಗಳ ಆವರಣದಲ್ಲಿ ಡಿಜೆ ಹಾಕಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತವಾಗ್ತಿದೆ. ಡಿಜೆ ಹಾಕಿ ಸಂಭ್ರಮಾಚರಣೆ ಮಾಡಲು ಅವಕಾಶ ಇಲ್ಲದೇ ಇದ್ದರೂ ಪವನ್ ಕಲ್ಯಾಣ್ ಅಭಿಮಾನಿಗಳು ಹುಚ್ಚಾಟ ಮೆರೆದಿದ್ದರು.

ತೆಲುಗು ಭಾಷೆಯ ಬ್ಯಾನರ್ ಹಾಕಿದ್ದಕ್ಕೆ ಕೂಡ ಕನ್ನಡಪರ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಮತ್ತೂ ಕೆಲವೆಡೆ ಲಾಂಗ್ ಹಿಡಿದು ಅಭಿಮಾನಿಗಳು ಮಿತಿಮೀರಿದ ವರ್ತನೆ ತೋರಿದ್ದರು. ಇದೇ ಕಾರಣಕ್ಕೆ ಕನ್ನಡಪರ ಸಂಘಟನೆಗಳು ತೆಲುಗು ಬ್ಯಾನರ್ ಹರಿದು, ಡಿಜೆಗೆ ಕೂಡ ಅವಕಾಶ ಕೊಟ್ಟಿರಲಿಲ್ಲ.

ಆದರೆ ತೆಲುಗು ಚಿತ್ರ ಬಿಡುಗಡೆಗೆ ಕರ್ನಾಟಕದಲ್ಲಿ ಅವಕಾಶ ಕೊಡ್ತಿಲ್ಲ, ಅಡ್ಡಿಪಡಿಸುತ್ತಿದ್ದಾರೆ ಎನ್ನುವ ಅರ್ಥದಲ್ಲಿ ತಪ್ಪಾಗಿ ಬಿಂಬಿಸಲಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ವೀಡಿಯೋಗಳನ್ನು ನೋಡಿ ಕರ್ನಾಟಕದಲ್ಲಿ ತೆಲುಗು ಸಿನಿಮಾ ಬಿಡುಗಡೆ ಬಿಡ್ತಿಲ್ಲ, ಬ್ಯಾನರ್ ಹರಿದು ಸಮಸ್ಯೆ ಕೊಡುತ್ತಿದ್ದಾರೆ ಎನ್ನುವ ಅರ್ಥದಲ್ಲಿ ಆಂಧ್ರ, ತೆಲಂಗಾಣ ಸಿನಿರಸಿಕರು ಭಾವಿಸಿದ್ದಾರೆ.

ಇದೇ ವಿಚಾರದ ಬಗ್ಗೆ ಇತ್ತೀಚೆಗೆ ನಟ ಉಪೇಂದ್ರ ಬಳಿ ಪ್ರಶ್ನಿಸಿದ್ದಾರೆ. ಈ ಬಗ್ಗೆ ರಿಯಲ್ ಸ್ಟಾರ್ ಪ್ರತಿಕ್ರಿಯಿಸಿದ್ದಾರೆ. ಕನ್ನಡದಲ್ಲಿ ಸಿನಿಮಾಗಳನ್ನು ಡಬ್ ಮಾಡಿ ಬಿಡಬೇಕು ಎನ್ನುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಉಪೇಂದ್ರ ಅಭಿಪ್ರಾಯ ಪಟ್ಟಿದ್ದಾರೆ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft