News

ಪುಣೆ ಜಮೀನು ವಿವಾದ,ನನ್ನ ಮಗನಿಗೆ ಅದು ಸರ್ಕಾರಿ ಜಾಗವೆಂದು ತಿಳಿದಿರಲಿಲ್ಲ :ಅಜಿತ್ ಪವಾರ್ !! ಸೋಶಿಯಲ್ ಮೀಡಿಯಾದಲ್ಲಿ ನಗೆಪಾಟಲಿ..!

ಪುಣೆ , ನವೆಂಬರ್ 8 :ಪುಣೆಯಲ್ಲಿನ 40 ಎಕರೆ ಜಮೀನು ಖರೀದಿಯಲ್ಲಿ ವ್ಯಾಪಕ ಪ್ರಮಾಣದ ಅಪಮೌಲ್ಯೀಕರಣ, ವಿಧಿ-ವಿಧಾನದಲ್ಲಿ ಅಕ್ರಮಗಳು ಹಾಗೂ ರಾಜಕೀಯ ಪ್ರಭಾವ ನಡೆದಿವೆ ಎಂಬ ಆರೋಪಗಳು ಕೇಳಿ ಬಂದ ಬೆನ್ನಿಗೇ, ಎನ್ಸಿಪಿ ಮುಖ್ಯಸ್ಥರೂ ಆದ ಅಜಿತ್ ಪವಾರ್ ಅವರು ಸ್ಪಷ್ಟನೆ ನೀಡಿದ್ದಾರೆ. ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ರ ಪುತ್ರ ಪುಣೆಯಲ್ಲಿನ ಸರಕಾರಿ ಜಮೀನು ಖರೀದಿಸಿರುವ ಕುರಿತು ಭಾರಿ ವಿವಾದ ಭುಗಿಲೆದ್ದಿರುವ ಬೆನ್ನಿಗೇ, ತಮ್ಮ ಪುತ್ರನ ನಡೆಯನ್ನು ಸಮರ್ಥಿಸಿಕೊಂಡಿರುವ ಅಜಿತ್ ಪವಾರ್, ಅದು ಸರಕಾರಿ ಜಮೀನು ಎಂದು ನನ್ನ ಪುತ್ರ ಹಾಗೂ ಆತನ ಪಾಲುದಾರನಿಗೆ ತಿಳಿದಿರಲಿಲ್ಲ. ಅದು ಸರಕಾರಿ ಜಮೀನು ಎಂದು ತಿಳಿದ ಕೂಡಲೇ ಆ ಖರೀದಿಯನ್ನು ರದ್ದುಗೊಳಿಸಿದ್ದೇವೆ ಎಂದಿದ್ದಾರೆ.

ಮೊನ್ನೆಯಷ್ಟೇ ಪುಣೆಯಲ್ಲಿ ಪವಾರ್ ಪುತ್ರ ಪಾರ್ಥ್ ಪಾಲುದಾರರಾಗಿರುವ ಅಮೆಡಿಯ ಎಂಟರ್ ಪ್ರೈಸಸ್ ಸಂಸ್ಥೆ ಸುಮಾರು 1,800 ಕೋಟಿ ರೂ. ಮೌಲ್ಯದ ಜಮೀನನ್ನು ಕೇವಲ ಸುಮಾರು 300 ಕೋಟಿ ರೂ.ಗೆ ಖರೀದಿಸಿದೆ ಎಂಬ ಆರೋಪಗಳು ಕೇಳಿ ಬಂದಿತ್ತು.

ಪುಣೆಯಲ್ಲಿನ 40 ಎಕರೆ ಜಮೀನು ಖರೀದಿಯಲ್ಲಿ ವ್ಯಾಪಕ ಪ್ರಮಾಣದ ಅಪಮೌಲ್ಯೀಕರಣ, ವಿಧಿ-ವಿಧಾನದಲ್ಲಿ ಅಕ್ರಮಗಳು ಹಾಗೂ ರಾಜಕೀಯ ಪ್ರಭಾವ ನಡೆದಿವೆ ಎಂಬ ಆರೋಪಗಳು ಕೇಳಿ ಬಂದ ಬೆನ್ನಿಗೇ, ಅಜಿತ್ ಪವಾರ್ ಈ ಸ್ಪಷ್ಟಣೆಯನ್ನು ನೀಡಿದ್ದಾರೆ. ಆದರೆ ಎಷ್ಟೊಂದು ದೊಡ ಸರ್ಕಾರಿ ಸ್ಥಾನದಲ್ಲಿರುವ ರಾಜಕಾರಣಿಗೆ ತಮ್ಮ ಮಗನು ಖರೀದಿಸುವ ಜಮೀನು, ಸರ್ಕಾರಿ ಜಮೀನು ಎಂದು ಗೊತ್ತೇ ಇರಲಿಲ್ಲ ಬೆಚಾರೀ (ಪಾಪ) ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಟ್ರೋಲ್ ಗಳು ನಗೆ ಪಾಟಲಿಗೀಡಾಗಿವೆ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft