ಸಿನಿಮಾ

ಶೂಟಿಂಗ್ ಪೂರ್ಣಗೊಳಿಸಿದ ‘ಮಾರ್ಕ್’; ಡಿಸೆಂಬರ್ 25ಕ್ಕೆ ರಿಲೀಸ್ ಫಿಕ್ಸ್

ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಜುಲೈನಲ್ಲಿ ಪ್ರಾರಂಭವಾಗಿ ಕೇವಲ ನಾಲ್ಕು ತಿಂಗಳಿನಲ್ಲಿ ಶೂಟಿಂಗ್ ಪೂರ್ಣಗೊಳಿಸಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರ ಡಿಸೆಂಬರ್ 25ಕ್ಕೆ ಬಿಡುಗಡೆಯಾಗಲಿದೆ. ಟೀಸರ್‌ನಲ್ಲಿ ಸುದೀಪ್ ಆಕ್ಷನ್ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಸುದೀಪ್ ಇಷ್ಟು ವೇಗವಾಗಿ ಪೂರ್ಣಗೊಳಿಸಿದ ಮೊದಲ ಸಿನಿಮಾ.

ಮಾರ್ಕ್’ ಸಿನಿಮಾ (Mark Movie) ಸೆಟ್ಟೇರಿದ್ದು ಜುಲೈನಲ್ಲಿ. ಕೇವಲ ನಾಲ್ಕೇ ತಿಂಗಳಲ್ಲಿ ಈ ಸಿನಿಮಾದ ಶೂಟ್​ನ ಸುದೀಪ್ ಪೂರ್ಣಗೊಳಿಸಿದ್ದಾರೆ. ಸದ್ಯ ತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸ ಆರಂಭಿಸಿದ್ದು, ಡಿಸೆಂಬರ್ 25ಕ್ಕೆ ರಿಲೀಸ್ ಫಿಕ್ಸ್ ಎಂದು ತಂಡ ಮಾಹಿತಿ ನೀಡಿದೆ. ಇತ್ತೀಚಿನ ವರ್ಷಗಳಲ್ಲಿ ಇಷ್ಟು ವೇಗವಾಗಿ ಸುದೀಪ್ ಸಿನಿಮಾ ಪೂರ್ಣಗೊಳಿಸಿದ್ದು ಇದೇ ಮೊದಲು ಎನ್ನಲಾಗುತ್ತಿದೆ.

ಮಾರ್ಕ್’ ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆ ಕಂಡಿದೆ. ಟೀಸರ್​ನಲ್ಲಿ ಸುದೀಪ್ ಅವರು ಸಾಕಷ್ಟು ಆ್ಯಕ್ಷನ್ ಮೆರೆದಿದ್ದಾರೆ. ಅವರ ಆ್ಯಕ್ಷನ್ ನೋಡಿ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಹೀಗಿರುವಾಗಲೇ ಸುದೀಪ್ ಹೊಸ ಚಿತ್ರದ ಬಗ್ಗೆ ಕ್ರೇಜಿ ಅಪ್​ಡೇಟ್ ಸಿಕ್ಕಿದೆ.

ಬಿಗ್ ಬಾಸ್ ಪೂರ್ಣಗೊಳ್ಳುವುದಕ್ಕೂ ಮೊದಲೇ ಸುದೀಪ್ ಅವರು ‘ಮಾರ್ಕ್’ ಸಿನಿಮಾದ ಬಹುತೇಕ ಶೂಟ್​ನ ಪೂರ್ಣಗೊಳಿಸಿದ್ದರು. ಈಗ ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ತಂಡ ಕೊನೆಯ ಹಂತದ ಚಿತ್ರೀಕರಣ ಪೂರ್ಣಗೊಳಿಸಿದೆ. ಶೂಟಿಂಗ್ ಮುಗಿಸಿರುವ ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿ ಇದೆ.

ಡಿಸೆಂಬರ್ 25ಕ್ಕೆ ರಿಲೀಸ್


‘ಮ್ಯಾಕ್ಸ್ ಸಿನಿಮಾ ಕಳೆದ ವರ್ಷ ಡಿಸೆಂಬರ್ 25ರಂದು ರಿಲೀಸ್ ಆಗಿತ್ತು. ಈ ಚಿತ್ರಕ್ಕೆ ಸುದೀಪ್ ಹೀರೋ ಆದರೆ ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದರು. ಇವರ ಕಾಂಬಿನೇಷನ್​ನಲ್ಲಿ ‘ಮಾರ್ಕ್’ ಬರುತ್ತಿದೆ. ಈ ಚಿತ್ರ ಕೂಡ ಕ್ರಿಸ್​​ಮಸ್ ಪ್ರಯುಕ್ತ ಡಿಸೆಂಬರ್​ 25ರಂದೇ ರಿಲೀಸ್ ಆಗಲಿದೆ. ‘ಮ್ಯಾಕ್ಸ್’ ರೀತಿಯೇ ಈ ಬಾರಿ ಕೂಡ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಜಯ್ ಮಾರ್ಕಂಡೆ ಎಂಬುದು ಸುದೀಪ್ ಮಾಡಿದ ಪಾತ್ರದ ಹೆಸರು.

‘ಮ್ಯಾಕ್ಸ್ ಸಿನಿಮಾ ಕಳೆದ ವರ್ಷ ಡಿಸೆಂಬರ್ 25ರಂದು ರಿಲೀಸ್ ಆಗಿತ್ತು. ಈ ಚಿತ್ರಕ್ಕೆ ಸುದೀಪ್ ಹೀರೋ ಆದರೆ ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದರು. ಇವರ ಕಾಂಬಿನೇಷನ್​ನಲ್ಲಿ ‘ಮಾರ್ಕ್’ ಬರುತ್ತಿದೆ. ಈ ಚಿತ್ರ ಕೂಡ ಕ್ರಿಸ್​​ಮಸ್ ಪ್ರಯುಕ್ತ ಡಿಸೆಂಬರ್​ 25ರಂದೇ ರಿಲೀಸ್ ಆಗಲಿದೆ. ‘ಮ್ಯಾಕ್ಸ್’ ರೀತಿಯೇ ಈ ಬಾರಿ ಕೂಡ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಜಯ್ ಮಾರ್ಕಂಡೆ ಎಂಬುದು ಸುದೀಪ್ ಮಾಡಿದ ಪಾತ್ರದ ಹೆಸರು.

ಶೇಖರ್ ಚಂದ್ರ ‘ಮಾರ್ಕ್’ ಸಿನಿಮಾಗೆ ಛಾಯಾಗ್ರಹಣ ಮಾಡಿದ್ದಾರೆ. ಅಜನೀಶ್ ಬಿ. ಲೋಕನಾಥ್ ಸಂಗೀತ ಸಯೋಜನೆ ಚಿತ್ರಕ್ಕೆ ಇದೆ. ‘ಸತ್ಯಜ್ಯೋತಿ ಫಿಲ್ಮ್ಸ್’ ಹಾಗೂ ‘ಕಿಚ್ಚ ಕ್ರಿಯೇಷನ್ಸ್’ ಬ್ಯಾನರ್‌ಗಳು ಜಂಟಿಯಾಗಿ ‘ಮಾರ್ಕ್’ ಚಿತ್ರವನ್ನು ನಿರ್ಮಿಸಿವೆ. ಸುದೀಪ್ ಅವರು ‘ಮಾರ್ಕ್​’ ಚಿತ್ರಕ್ಕಾಗಿ ಭಿನ್ನ ಹೇರ್​ಸ್ಟೈಲ್ ಮಾಡಿಕೊಂಡಿದ್ದಾರೆ. ಡಿಸೆಂಬರ್​ನಲ್ಲಿ ‘ಡೆವಿಲ್’ ಹಾಗೂ ‘45’ ಎರಡೂ ಸಿನಿಮಾ ರಿಲೀಸ್ ಆಗುತ್ತಿದ್ದು, ಬಾಕ್ಸ್​ ಆಫೀಸ್​ನಲ್ಲಿ ಕ್ಲ್ಯಾಶ್ ಜೋರಿರಲಿದೆ

Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft