Business News

10 ಅಧಿಕಾರಿಗಳ ನಿವಾಸಕ್ಕೆ ಲೋಕಾಯುಕ್ತ ದಾಳಿ !! ಕೋಟ್ಯಾಂತರ ಬೆಲೆಗಳ ಚಿನ್ನ ಮತ್ತು ಆಸ್ತಿ ದಾಖಲೆಗಳು ವಶಕ್ಕೆ !

ಮೈಸೂರು : ಕರ್ನಾಟಕ ಲೋಕಾಯುಕ್ತರು ಮೈಸೂರು ಮತ್ತು ಇತರ ಜಿಲ್ಲೆಗಳಲ್ಲಿ 10 ಸರ್ಕಾರಿ ಅಧಿಕಾರಿಗಳ ನಿವಾಸಗಳು ಮತ್ತು ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ, ಕೋಟ್ಯಂತರ ಮೌಲ್ಯದ ಆಸ್ತಿ ದಾಖಲೆಗಳು, ಚಿನ್ನಾಭರಣಗಳು ಮತ್ತು ಅಪಾರ ಪ್ರಮಾಣದ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಮಂಗಳವಾರ ಬೆಳಗಿನ ಜಾವ ಕರ್ನಾಟಕ ಲೋಕಾಯುಕ್ತರು 10 ಸರ್ಕಾರಿ ಅಧಿಕಾರಿಗಳ ನಿವಾಸಗಳು ಮತ್ತು ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ, ಕೋಟ್ಯಂತರ ಮೌಲ್ಯದ ಆಸ್ತಿ ಪತ್ರಗಳು, ಚಿನ್ನಾಭರಣಗಳು ಮತ್ತು ಅಪಾರ ಪ್ರಮಾಣದ ನಗದು ವಶಪಡಿಸಿಕೊಂಡಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳ ತನಿಖೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಕರ್ನಾಟಕದ ವಿವಿಧ ಇಲಾಖೆಗಳಲ್ಲಿ ಹಿರಿಯ ಮತ್ತು ಮಧ್ಯಮ ಮಟ್ಟದ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಈಡಾದವರು :ರಾಮಸ್ವಾಮಿ ಸಿ, ಕಂದಾಯ ನಿರೀಕ್ಷಕರು, ಹೂಟಗಳ್ಳಿ ಪುರಸಭೆ, ಮೈಸೂರುಪುಟ್ಟಸ್ವಾಮಿ ಸಿ, ಮುಖ್ಯ ಲೆಕ್ಕಾಧಿಕಾರಿ, ಪಟ್ಟಣ ಪುರಸಭೆ, ಮಂಡ್ಯಪ್ರೇಮ್ ಸಿಂಗ್, ಮುಖ್ಯ ಎಂಜಿನಿಯರ್, ಅಪ್ಪರ್ ಕೃಷ್ಣಾ ಯೋಜನೆ, ಬೀದರ್ಸುಭಾಷ್ ಚಂದ್ರ, ಸಹಾಯಕ ಪ್ರಾಧ್ಯಾಪಕರು, ಸಮಾಜಶಾಸ್ತ್ರ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡಸತೀಶ್, ಹಿರಿಯ ಪಶುವೈದ್ಯಕೀಯ ನಿರೀಕ್ಷಕರು, ಪ್ರಾಥಮಿಕ ಪಶುವೈದ್ಯಕೀಯ ಚಿಕಿತ್ಸಾಲಯ, ಹುಬ್ಬಳ್ಳಿ, ಧಾರವಾಡ .ಶೇಖಪ್ಪ, ಕಾರ್ಯನಿರ್ವಾಹಕ ಎಂಜಿನಿಯರ್, ಯೋಜನಾ ನಿರ್ದೇಶಕರ ಕಚೇರಿ, ಹಾವೇರಿಕುಮಾರಸ್ವಾಮಿ ಪಿ, ಕಚೇರಿ ಅಧೀಕ್ಷಕರು, ಪ್ರಾದೇಶಿಕ ಸಾರಿಗೆ ಕಚೇರಿ, ಎಲೆಕ್ಟ್ರಾನಿಕ್ ಸಿಟಿ, ಬೆಂಗಳೂರುಲಕ್ಷ್ಮೀಪತಿ ಸಿ.ಎನ್, ಪ್ರಥಮ ದರ್ಜೆ ಸಹಾಯಕ, ಸಿಮ್ಸ್ ವೈದ್ಯಕೀಯ ಕಾಲೇಜು, ಶಿವಮೊಗ್ಗಪ್ರಭು ಜೆ, ಸಹಾಯಕ ನಿರ್ದೇಶಕರು, ಕೃಷಿ ಮಾರಾಟ ಡಿಪೋ, ಎಪಿಎಂಸಿ, ದಾವಣಗೆರೆಗಿರೀಶ್ ಡಿ.ಎಂ., ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ, ಮೈಸೂರು-ಮಡಿಕೇರಿ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft