
ಇಸ್ರೇಲ್ ನರಮೇಧವನ್ನು ತೀವ್ರವಾಗಿ ವಿರೋಧಿಸಿದ್ದ, “2002ರಲ್ಲಿ ಮೋದಿ ಗುಜರಾತ್‌ನಲ್ಲಿ ನಡೆಸಿದ್ದ ನರಹತ್ಯೆ ಘೋರ ಅಪರಾಧ!!” ಎಂದು ಖಂಡಿಸಿದ್ದ , ಭಾರತೀಯ ಮೂಲದ ಅಮೇರಿಕಾದ ಶ್ರೇಷ್ಠ ಎಡಪಂಥೀಯ ಹೋರಾಟಗಾರ “ಝೊಹ್ರಾನ್ ಮಮ್ದಾನಿ” ವಿಶ್ವದ ಶಕ್ತಿಶಾಲಿ ನಗರಗಳಲ್ಲೊಂದಾದ “ನ್ಯೂಯಾರ್ಕ್ ಸಿಟಿ”ಯ ಮೇಯರ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಭಾರತೀಯ ಮೂಲದ ಝೋಹ್ರಾನ್, ಖ್ಯಾತ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಮತ್ತು ಶಿಕ್ಷಣತಜ್ಞ ಮಹಮೂದ್ ಮಮ್ದಾನಿಯವರ ಪುತ್ರ.




