Sports

ಭಾರತ–ಆಸ್ಟ್ರೇಲಿಯಾ 4ನೇ T20 ಪಂದ್ಯ: ಭಾರತದಿಂದ ಭರ್ಜರಿ 48 ರನ್ ಜಯ!

ಗೋಲ್ಡ್ ಕೋಸ್ಟ್ ಆಸ್ಟ್ರೇಲಿಯಾ ನವೆಂ 7 :ಭಾರತೀಯ ತಂಡವು ಆಸ್ಟ್ರೇಲಿಯಾದ ವಿರುದ್ಧ ನಡೆದ ನಾಲ್ಕನೇ T20 ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ 48 ರನ್‌ಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನಿಂದ ಭಾರತ ಐದು ಪಂದ್ಯಗಳ ಸರಣಿಯಲ್ಲಿ 2–1 ಮುನ್ನಡೆ ಪಡೆದಿದೆ.


🔹 ಟಾಸ್ ಗೆದ್ದ ಭಾರತ:

ಟಾಸ್‌ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದಲ್ಲಿ ಶೂಭ್ಮನ್ ಗಿಲ್ (46 ರನ್, 39 ಬಾಲ್) ಮತ್ತು ಅಭಿಷೇಕ್ ಶರ್ಮಾ (28 ರನ್) ಸತತ ಸ್ಕೋರ್ ನಿರ್ಮಿಸಿದರು.
ಶಿವಂ ದುಬೆ (22 ರನ್) ಹಾಗೂ ಸೂರ್ಯಕುಮಾರ್ ಯಾದವ್ (18 ರನ್) ಸಹ ಹಿನ್ನಡೆಯನ್ನು ತಡೆಯಲು ಪ್ರಯತ್ನಿಸಿದರು.
ಭಾರತ 20 ಓವರ್‌ಗಳಲ್ಲಿ 167/8 ರನ್ ಗಳಿಸಿತು.

ಆಸ್ಟ್ರೇಲಿಯಾದ ಬೌಲಿಂಗ್ ವಿಭಾಗದಲ್ಲಿ ಝಾಮ್ಪಾ ಮತ್ತು ಸ್ಟೋಯ್ನಿಸ್ ತಲಾ ಎರಡು ವಿಕೆಟ್ ಪಡೆದರು.


🔹 ಆಸ್ಟ್ರೇಲಿಯಾ ಚೇಸಿಂಗ್ ವಿಫಲ:

167 ರನ್ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡವು ಆರಂಭದಲ್ಲಿ ಮ್ಯಾಥ್ಯೂ ಶಾರ್ಟ್ (25 ರನ್) ಮತ್ತು ಮಿಚೆಲ್ ಮಾರ್ಶ್ (30 ರನ್) ಇವರಿಂದ ಉತ್ತಮ ಆರಂಭ ಪಡೆದರೂ ಮಧ್ಯ ಓವರ್‌ಗಳಲ್ಲಿ ಸಂಪೂರ್ಣ ಕುಸಿತ ಕಂಡಿತು.
ಭಾರತೀಯ ಸ್ಪಿನ್ನರ್‌ಗಳು ಆಸ್ಟ್ರೇಲಿಯಾದ ಬ್ಯಾಟಿಂಗ್ ಕ್ರಮವನ್ನು ಸಂಪೂರ್ಣ ಹಾಳುಮಾಡಿದರು.

ಆಸ್ಟ್ರೇಲಿಯಾ ತಂಡವು 18.2 ಓವರ್‌ಗಳಲ್ಲಿ 119 ರನ್‌ಗೆ ಆಲೌಟ್ ಆಯಿತು.

ಭಾರತದ ಬೌಲರ್‌ಗಳು ಈ ಪಂದ್ಯದಲ್ಲಿ ಪ್ರಮುಖ ಪಾತ್ರ ವಹಿಸಿದರು ,ವಾಷಿಂಗ್ಟನ್ ಸುಂದರ್ – 3 ವಿಕೆಟ್ ಕೆವಲ 3 ರನ್ ನೀಡಿದರು. ಅಕ್ಷರ್ ಪಟೇಲ್ – 2 ವಿಕೆಟ್ / 20 ರನ್ (ಮ್ಯಾನ್ ಆಫ್ ದಿ ಮ್ಯಾಚ್).

ವರುಣ್ ಚಕ್ರವರ್ತಿ ಮತ್ತು ಅರ್ಷದೀಪ್ ಸಿಂಗ್ ತಲಾ ಒಂದು ವಿಕೆಟ್ ಪಡೆದು ಆಸ್ಟ್ರೇಲಿಯಾದ ಚೇಸ್ ಅನ್ನು ಸಂಪೂರ್ಣವಾಗಿ ಕಬಳಿಸಿದರು.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft