News

ಕರಾವಳಿ ಉತ್ಸವ ಎಂದು ಏನೆಲ್ಲಾ ಕಾರ್ಯಕ್ರಮ ವಿವರ ಇಲ್ಲಿದೆ

Uttara kannada news (20december 2025):-ಕಾರವಾರದ (karwar) ರವೀಂದ್ರನಾಥ ಠಾಗೋರ್ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಡಿ.22 ರಿಂದ 28 ರವೆರಗೆ ನಡೆಯುವ ಕರಾವಳಿ ಉತ್ಸವ-2025 ನಡೆಯಲಿದೆ.

ಉತ್ಸವಕ್ಕೆ ಮಂಜೂರಾದ ಹಣ

ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ  ರೂ.1 ಕೋಟಿ ಅನುದಾನ ನೀಡುವುದಾಗಿ ಮಂತ್ರಿಗಳು ತಿಳಿಸಿದ್ದು, ಇದರ ಜೊತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರೂ.5 ಕೋಟಿ ಅನುದಾನ ಬಿಡುಗಡೆಯಾಗಲಿದೆ

ಸಂಗೀತ ಕಾರ್ಯಕ್ರಮ

ಇವೆಂಟ್ ಮ್ಯಾನೇಜಮೆಂಟ್ ಅವರು ಕಾರ್ಯಕ್ರಮದ ಸಂಗೀತ ಪ್ರದರ್ಶನ ನೀಡಲು ಕಲಾವಿದರನ್ನು ಅಂತಿಮಗೊಳಿಸಿ ಜಿಲ್ಲಾಡಳಿತಕ್ಕೆ ನೀಡಿದ್ದು, ಅದರಂತೆ ಡಿ.22 ರಂದು ಶಂಕರ ಮಹಾದೇವನ್, ಡಿ.23 ರಂದು ಮೀಕಾ ಸಿಂಗ್, ಡಿ.24 ರಂದು ಸೋನು ನಿಗಮ್, ಡಿ.25 ರಂದು ರಫ್ತಾರ್, ಡಿ.27 ರಂದು ಮಹಮ್ಮದ್ ದಾನೀಶ್, ಹಾಗೂ ಡಿ. 28 ರಂದು ದಲೇರಿ ಮೆಹಂದಿ ತಂಡದವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಕರಾವಳಿ ಉತ್ಸವ ಕಾರ್ಯಕ್ರಮ ಆಯೋಜನೆ ಕುರಿತಂತೆ  ಅಧಿಕಾರಿಗಳ ನೇತೃತ್ವದಲ್ಲಿ ಈಗಾಗಲೇ ವಿವಿಧ ಸಮಿತಿಗಳನ್ನು ರಚನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಗೆ ಪ್ರತಿ ದಿನ ಸಂಜೆ 5.30 ಗಂಟೆಯಿಂದ 7.30 ಗಂಟೆಯವರಗೆ ಅವಕಾಶ ನೀಡಲಾಗಿದೆ.

ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ವಿವಿಧ ಸ್ಪರ್ಧೆಗಳು ಮತ್ತು ಮನರಂಜನಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಡಿ.22 ರಂದು ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸುವ ಗಣ್ಯರಿಗೆ ವೇದಿಕೆಗೆ ಸ್ವಾಗತಿಸಲು ಜಿಲ್ಲಾ ಮತ್ತು ರಾಜ್ಯ ಮಟ್ಟದ 15 ರಿಂದ 20 ಕಲಾ ತಂಡಗಳಿoದ ಮೆರವಣಿಗೆ, ಮೀನುಗಾರರ ದೀಪ ಮೇರವಣಿಗೆ, ಡಿ.23 ರಂದು ಛಾಯಾಗ್ರಹಣ ಮತ್ತು ರೀಲ್ಸ್ ಸ್ಪರ್ಧೆ ಆಯೋಜನೆ ಮಾಡಲಾಗಿದ್ದು, ಆಯ್ಕೆಯಾದ ಛಾಯಾಗ್ರಹಣ ಮತ್ತು ರೀಲ್ಸ್ಗಳನ್ನು ಕಾರ್ಯಕ್ರಮದ ಅoತಿಮ ದಿನದವರೆಗೂ ಪ್ರದರ್ಶನ ಮಾಡಲಾಗುವುದು .ಡಿ.24 ರಂದು ರಂಗೋಲಿ ಮತ್ತು ಅಡುಗೆ ಸ್ಪರ್ಧೆ, 25 ರಂದು ಮ್ಯಾರಥಾನ್ ಮತ್ತು ಕರಾವಳಿ ರನ್ ಸ್ಪರ್ಧೆಯು 3, 5 ಮತ್ತು 10 ಕಿ.ಮೀ. ವಿಭಾಗದಲ್ಲಿ ನಡೆಯಲಿದೆ. ಡಿ.26 ರಂದು ಹಗ್ಗ ಜಗ್ಗಾಟ, ಮಕ್ಕಳ ಚಿತ್ರಕಲಾ ಸ್ಪರ್ಧೆ, ಗೋಡೆಗಳ ಮೇಲೆ ಚಿತ್ರಕಲಾ ಸ್ಪರ್ಧೆ ಮತ್ತು ಡಿ.27 ರಂದು ಶ್ವಾನ ಪ್ರದರ್ಶನ ಸ್ಪರ್ಧೆ ನಡೆಯಲಿದೆ.

ಕರಾವಳಿ ಉತ್ಸವ ಕಾರ್ಯಕ್ರಮ ಹಾಗೂ ಆಹ್ವಾನ ಪತ್ರಿಕೆ

ಕರಾವಳಿ ಉತ್ಸವ : ಐತಿಹಾಸಿಕ  ಸ್ಥಳ ಮತ್ತು  ಅಲ್ಲಿಗೆ ಭೇಟಿ ನೀಡಿದ ಗಣ್ಯ ವ್ಯಕ್ತಿ ಗಳ ಛಾಯಾಚಿತ್ರ ಪ್ರದರ್ಶನ.

ಡಿಸೇಂಬರ್ 22 ರಿಂದ 28 ರ ವರೆಗೆ ಕಾರವಾರದ ರವೀಂದ್ರನಾಥ ಟ್ಯಾಗೋರ ಕಡಲತೀರದಲ್ಲಿ “ಕರಾವಳಿ ಉತ್ಸವ-2025” ನ್ನು ಆಚರಿಸುವ ಪ್ರಯುಕ್ತ ಉತ್ತರ ಕನ್ನಡ ಜಿಲ್ಲೆಯ ಪುರಾತನ ಐತಿಹಾಸಿಕ ಸ್ಥಳಗಳ ಹಳೆಯ ಛಾಯಾಚಿತ್ರಗಳು ಹಾಗೂ ಜಿಲ್ಲೆಯಲ್ಲಿ ಯಾವುದೇ ಪ್ರವಾಸಿ ಅಥವಾ ಐತಿಹಾಸಿಕ ಪ್ರಸಿದ್ದ ಸ್ಥಳಗಳಿಗೆ ಗಣ್ಯರು ಭೇಟಿ ನೀಡಿದ್ದ ಹಳೆಯ ಛಾಯಾಚಿತ್ರಗಳು ಲಭ್ಯವಿದ್ದಲ್ಲಿ ಅಂತಹ ಛಾಯಾಚಿತ್ರಗಳನ್ನು ಪ್ರವಾಸೋದ್ಯಮ ಇಲಾಖೆ, ಕಾರವಾರ ಕಛೇರಿಯಲ್ಲಿ ಒದಗಿಸಿದ್ದಲ್ಲಿ, ಆಕರ್ಷಕವುಳ್ಳ ಛಾಯಾಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗುವುದು.

ಛಾಯಾಚಿತ್ರ ಸಲ್ಲಿಸಲು ಡಿ.19 ಕೊನೆಯ ದಿನವಾಗಿದೆ. ಛಾಯಾಚಿತ್ರ ಅಳತೆ 2×2.5 ಅಡಿ (with frame) ನಲ್ಲಿರಬೇಕು.

ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಕಾರವಾರ, ಆರ್.ಟಿ.ಓ.ಆಫೀಸ್ ಹತ್ತಿರ e-mail-ddtourismkarwar@gmail.com ದೂರವಾಣಿ: 08382-221172, ಮೊಬೈಲ್ ನಂ. 8618404610 / 9036074715 ಕ್ಕೆ ಸಂಪರ್ಕಿಸುವoತೆ ಉಪ ನಿರ್ದೇಶಕರು ಹಾಗೂ ಸದಸ್ಯ ಕಾರ್ಯದರ್ಶಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅವರ ಪ್ರಕಟಣೆ ತಿಳಿಸಿದೆ.

Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft