Business

ಆಭರಣ ಪ್ರಿಯರಿಗೆ ಇಂದುಶುಭ ಶುಕ್ರವಾರ: ಇಳಿದಿದೆ ಚಿನ್ನದ ಬೆಲೆ, ಇಂದು ಎಷ್ಟಾಗಿದೆ ಗೊತ್ತಾ?

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಂದು ಮತ್ತೆ ಇಳಿಕೆಯಾಗಿದೆ. ಚಿನ್ನ ಕೊಳ್ಳುವವರಿಗೆ ಇದು ಉತ್ತಮ ಸಮಯ. 24 ಕ್ಯಾರೆಟ್ ಚಿನ್ನದ ಬೆಲೆ 550 ರೂ ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ 500 ರೂ ಇಳಿಕೆಯಾಗಿದೆ. ಬೆಳ್ಳಿ ಬೆಲೆ ಸ್ಥಿರವಾಗಿದ್ದು, ಕೆಜಿಗೆ 1,52,500 ರೂ ಇದೆ. ಜಿಎಸ್ಟಿ ಸೇರಿಲ್ಲದ ಕಾರಣ ಮಳಿಗೆಗಳಲ್ಲಿ ಬೆಲೆ ವ್ಯತ್ಯಾಸವಿರಲಿದೆ.

ಹೈಲೈಟ್ಸ್‌:

  • ದೇಶೀಯ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 12,202 ರೂಪಾಯಿ ಇದೆ
  • ಬೆಳ್ಳಿ ಬೆಲೆ ಇಂದು ತಟಸ್ಥವಾಗಿದ್ದು, ಗ್ರಾಂಗೆ 152.50 ರೂ ಆಗಿದೆ
  • 24 ಕ್ಯಾರೆಟ್ ಬೆಲೆಯಲ್ಲಿ ಇಂದು ಒಟ್ಟು 550 ರೂ ಇಳಿಕೆ ಆಗಿದೆ.

ಬೆಂಗಳೂರು: ಚಿನ್ನದ ಬೆಲೆ ಗುರುವಾರ ತಾತ್ಕಾಲಿಕ ಏರಿಕೆ ಆದ ಬಳಿಕ, ಇಂದು ಮತ್ತೆ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದೆ. ಅದ್ಯ ಬೆಲೆ ಏರಿಕೆ ಪರ್ವಕ್ಕೆ ಬ್ರೇಕ್ ಬಿದ್ದಿದ್ದು, ಚಿನ್ನ ಕೊಳ್ಳುವವರಿಗೆ ಇದು ಬೆಸ್ಟ್ ಟೈಂ ಆಗಿದೆ.

ಶುದ್ಧ ಚಿನ್ನದ ಇಂದಿನ ದರ ಎಷ್ಟಿದೆ?

ನವೆಂಬರ್ 7 ಶುಕ್ರವಾರದಂದು ದೇಶೀಯ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 12,202 ರೂಪಾಯಿ ಇದ್ದು, ಇಂದು 55 ರೂಪಾಯಿ ಇಳಿಕೆ ಆಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,22 020 ರೂಪಾಯಿ ಇದೆ. 24 ಕ್ಯಾರೆಟ್ ಬೆಲೆಯಲ್ಲಿ ಇಂದು ಒಟ್ಟು 550 ರೂ ಇಳಿಕೆ ಆಗಿದೆ.

22 ಕ್ಯಾರೆಟ್ ಚಿನ್ನದ ಬೆಲೆ

22 ಕ್ಯಾರೆಟ್ 1 ಗ್ರಾಂ ಬೆಲೆ 11,185 ರೂಪಾಯಿ ಇದ್ದು, 50 ರೂ ಇಳಿಕೆ ಕಂಡಿದೆ. 10 ಗ್ರಾಂ ಬೆಲೆ 1,11,850 ರೂಪಾಯಿ ಇದೆ. ಇಂದು 500 ರೂ ಏರಿಕೆ ಆಗಿದೆ.


ಬೆಂಗಳೂರಿನ ಚಿನ್ನ-ಬೆಳ್ಳಿ ದರ ಎಷ್ಟಿದೆ?

ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 12202 ರೂಪಾಯಿ ಇದ್ದು, 10 ಗ್ರಾಂ ಶುದ್ಧ ಚಿನ್ನಕ್ಕೆ 1,22,020 ರೂಪಾಯಿ ಇದೆ. ಈ ಬೆಲೆಯಲ್ಲಿ ಜಿಎಸ್‌ಟಿ ಸೇರಿಲ್ಲ, ಹೀಗಾಗಿ ಮಳಿಗೆಗಳಲ್ಲಿ ವ್ಯತ್ಯಾಸ ಇರಲಿದೆ.


ಬೆಳ್ಳಿ ಬೆಲೆ ಏರಿಕೆ

ಬೆಳ್ಳಿ ಬೆಲೆ ಇಂದು ತಟಸ್ಥವಾಗಿದ್ದು, ಗ್ರಾಂಗೆ 152.50 ರೂ ಆಗಿದ್ದು ಕೆಜಿಗೆ 1,52,500 ರೂ ಇದೆ.


ಈ ವಾರ ಚಿನ್ನದ ಬೆಲೆ ಏರಿಳಿತದ ಸಾಧ್ಯತೆ

ಅಕ್ಟೋಬರ್ 1 ರಿಂದ ಆರಂಭವಾಗಿರುವ ಮತ್ತು ಅಮೆರಿಕದ ಇತಿಹಾಸದಲ್ಲಿಯೇ ಅತಿ ದೀರ್ಘಕಾಲ ಮುಂದುವರೆದಿರುವ ಅಮೆರಕ ಸರ್ಕಾರದ ಶಟ್‌ಡೌನ್‌ ಕಾರಣದಿಂದ ಸುರಕ್ಷಿತ ಹೂಡಿಕೆಗಳ ಮೇಲಿನ ಬೇಡಿಕೆಯನ್ನು ಹೆಚ್ಚಿಸಿದೆ. ಡಾಲರ್ ಸೂಚ್ಯಂಕವು 100 ಅಂಕಗಳ ಕೆಳಗೆ ಕುಸಿದಿರುವುದು ಕೂಡ ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರಿದೆ. ಡಾಲರ್ ದುರ್ಬಲಗೊಂಡಾಗ, ವಿದೇಶಿ ಕರೆನ್ಸಿಗಳಲ್ಲಿ ಚಿನ್ನ ಅಗ್ಗವಾಗುತ್ತದೆ, ಇದು ಬೇಡಿಕೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ.

ಪ್ರಿಥ್ವಿಫಿನ್‌ಮಾರ್ಟ್ ಕಮಾಡಿಟಿ ರಿಸರ್ಚ್‌ನ ಮನೋಜ್ ಕುಮಾರ್ ಜೈನ್ ಅವರ ಪ್ರಕಾರ, ಚಿನ್ನ ಮತ್ತು ಬೆಳ್ಳಿ ಹೆಚ್ಚಿನ ಮಟ್ಟದಲ್ಲಿ ಗಣನೀಯ ಪ್ರತಿರೋಧವನ್ನು ಎದುರಿಸುತ್ತಿವೆ, ಆದರೆ ತಮ್ಮ ಪ್ರಮುಖ ಬೆಂಬಲ ಮಟ್ಟಗಳನ್ನು ಕಾಯ್ದುಕೊಂಡಿವೆ. ಡಾಲರ್ ಸೂಚ್ಯಂಕವು ಮೂರು ತಿಂಗಳ ಗರಿಷ್ಠ ಮಟ್ಟದಿಂದ ಕುಸಿದಿದೆ. ಅಮೆರಿಕದ ಸರ್ಕಾರಿ ಮುಚ್ಚುವಿಕೆ ಯಾವಾಗ ಕೊನೆಗೊಳ್ಳುತ್ತದೆ ಎಂಬ ಅನಿಶ್ಚಿತತೆಯು ಬೆಲೆಬಾಳುವ ಲೋಹಗಳ ಮೇಲಿನ ಸುರಕ್ಷಿತ ಹೂಡಿಕೆ ಬೇಡಿಕೆಯನ್ನು ಬೆಂಬಲಿಸಬಹುದು. ಜಾಗತಿಕ ರಾಜಕೀಯ ಉದ್ವಿಗ್ನತೆಗಳೂ ಸಹ ಬೆಲೆಬಾಳುವ ಲೋಹಗಳ ಬೆಲೆಯನ್ನು ಹೆಚ್ಚಿಸುತ್ತಿವೆ ಎಂದು ಅವರು ಹೇಳಿದ್ದಾರೆ.

Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft