Health + News

ಮೊಟ್ಟೆ ಅಥವಾ ಪನ್ನೀರ್ , ಪ್ರೋಟೀನ್‌ಗೆ ಯಾವುದು ಉತ್ತಮ? ಫಿಟ್ನೆಸ್ ಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದ ಪ್ರಶ್ನೆಗೆ ಇಲ್ಲಿದೆ ಉತ್ತರ.

ಬೆಂಗಳೂರು: ದೇಹದ ಬಲವರ್ಧನೆ, ಮಸಲ್‌ ಬಿಲ್ಡಿಂಗ್ ಹಾಗೂ ದಿನನಿತ್ಯದ ಪ್ರೋಟೀನ್ ಅವಶ್ಯಕತೆಯ ಬಗ್ಗೆ ಮಾತನಾಡುವಾಗ ಮೊಟ್ಟೆ ಮತ್ತು ಪನ್ನೀರ್ ಇಬ್ಬರೂ ಆಹಾರ ಜಗತ್ತಿನ ಪ್ರಮುಖ ಆಯ್ಕೆಗಳು. ಆರೋಗ್ಯ ತಜ್ಞರ ಪ್ರಕಾರ ಎರಡಕ್ಕೂ ತಮ್ಮದೇ ಆದ ಪ್ರಯೋಜನಗಳಿದ್ದರೂ, ಯಾವುದು ‘ಉತ್ತಮ’ ಎಂದು ನಿರ್ಧರಿಸುವುದು ವ್ಯಕ್ತಿಯ ಗುರಿ ಹಾಗೂ ದೇಹದ ಅವಶ್ಯಕತೆಯ ಮೇಲೆ ಅವಲಂಬಿತವಾಗಿದೆ.

ಒಂದು ಮೊಟ್ಟೆಯಲ್ಲಿ ಸರಾಸರಿ ಆರು ಗ್ರಾಂ ಪ್ರೋಟೀನ್ ಇರುತ್ತದೆ ಮತ್ತು ಇದನ್ನು ‘ಪೂರ್ಣ ಪ್ರೋಟೀನ್’ ಎಂದು ಕರೆಯಲಾಗುತ್ತದೆ. ಅಂದರೆ ದೇಹಕ್ಕೆ ಅಗತ್ಯವಾದ ಎಲ್ಲಾ ಅಮೀನೋ ಆಸಿಡ್‌ಗಳನ್ನು ಇದು ಒದಗಿಸುತ್ತದೆ. ಜೊತೆಗೆ ಮೊಟ್ಟೆಯ ಪ್ರೋಟೀನ್ ದೇಹಕ್ಕೆ ಬೇಗವಾಗಿ ಹೀರಿಕೊಳ್ಳುತ್ತದೆ. ಹೀಗಾಗಿ ವ್ಯಾಯಾಮದ ನಂತರ ತಕ್ಷಣ ಮಸಲ್‌ ಪುನರ್‌ರಚನೆಗೆ ಇದು ಉಪಕಾರಿಯಾಗಿ ಕಾಣಿಸುತ್ತದೆ. ಕಡಿಮೆ ಕ್ಯಾಲೊರಿಯ ಆಹಾರವಾಗಿರುವುದರಿಂದ ತೂಕ ನಿಯಂತ್ರಣಕ್ಕೆ ಬಯಸುವವರು ಕೂಡಾ ಮೊಟ್ಟೆಯನ್ನು ಹೆಚ್ಚು ಆಯ್ಕೆ ಮಾಡುತ್ತಾರೆ.

ಪನ್ನೀರ್‌ನಲ್ಲಿ ಪ್ರೋಟೀನ್ ಪ್ರಮಾಣ ಹೆಚ್ಚು. 100 ಗ್ರಾಂ ಪನ್ನೀರ್‌ನಲ್ಲಿ ಸರಾಸರಿ 18ರಿಂದ 20 ಗ್ರಾಂ ಪ್ರೋಟೀನ್ ಸಿಗುತ್ತದೆ. ಇದರಲ್ಲಿ ಇರುವ casein ಪ್ರೋಟೀನ್ ನಿಧಾನವಾಗಿ ಹೀರಿಕೊಳ್ಳುವುದರಿಂದ ದೇಹಕ್ಕೆ ದೀರ್ಘಾವಧಿಯ ಪ್ರೋಟೀನ್ ಪೂರೈಕೆ ಸಿಗುತ್ತದೆ. ಹೀಗಾಗಿ ಮಸಲ್‌ ಬೆಳವಣಿಗೆ, ಶಕ್ತಿ ಹಾಗೂ vegeterian ಆಹಾರ ಪದ್ಧತಿಯನ್ನು ಅನುಸರಿಸುವವರಿಗೆ ಪನ್ನೀರ್ ಉತ್ತಮ ಆಯ್ಕೆ. ಆದರೆ ಪನ್ನೀರ್‌ನಲ್ಲಿ ಮೊಟ್ಟೆಯಿಗಿಂತ ಹೆಚ್ಚು ಕ್ಯಾಲೊರಿ ಮತ್ತು ಕೊಬ್ಬು ಇರುವುದರಿಂದ ತೂಕ ಹೆಚ್ಚಿಸಿಕೊಳ್ಳಬಯಸುವ ಅಥವಾ ಶಾರೀರಿಕ ಶ್ರಮ ಹೆಚ್ಚು ಬೇಕಾಗುವವರಿಗೆ ಇದು ಹೆಚ್ಚು ಸೂಕ್ತ.ತಜ್ಞರ ಅಭಿಪ್ರಾಯದಲ್ಲಿ ಎರಡನ್ನೂ “ಯಾವುದು ಯಾವಾಗ ತಿನ್ನಬೇಕು” ಎಂಬ ವಿಚಾರ ಮುಖ್ಯ. ವ್ಯಾಯಾಮದ ನಂತರ ಬೇಗನೆ ಹೀರಿಕೊಳ್ಳುವ ಪ್ರೋಟೀನ್ ಬೇಕಿದ್ದರೆ ಮೊಟ್ಟೆ ಉತ್ತಮ. ದಿನವಿಡೀ ಶಕ್ತಿ ಹಾಗೂ ನಿಧಾನವಾಗಿ ಹೀರಿಕೊಳ್ಳುವ ಪ್ರೋಟೀನ್ ಬೇಕಾದರೆ ಪನ್ನೀರ್ ಉಪಯುಕ್ತ. vegeterian ಆहार ಅನುಸರಿಸುವವರಿಗೆ ಪನ್ನೀರ್ ಪ್ರಮುಖ ಮೂಲವಾಗಿದ್ದರೆ, ಕಡಿಮೆ ಖರ್ಚಿನಲ್ಲಿ ಪ್ರೋಟೀನ್ ತೆಗೆದುಕೊಳ್ಳುವವರಿಗೆ ಮೊಟ್ಟೆ ಸುಲಭ ಆಯ್ಕೆ.

ಒಟ್ಟಿನಲ್ಲಿ, ದೇಹದ ಗುರಿ, ಆಹಾರ ಪದ್ಧತಿ ಹಾಗೂ ಆರೋಗ್ಯ ಪರಿಸ್ಥಿತಿಗೆ ಅನುಗುಣವಾಗಿ ಮೊಟ್ಟೆ ಮತ್ತು ಪನ್ನೀರ್ ಎರಡೂ ಉತ್ತಮ ಪ್ರೋಟೀನ್ ಮೂಲಗಳೇ. ದಿನನಿತ್ಯದ ಆಹಾರದಲ್ಲಿ ಎರಡನ್ನೂ ಸಮತೋಲನದಿಂದ ಸೇರಿಸಿಕೊಳ್ಳುವುದರಿಂದ ಪ್ರೋಟೀನ್ ಅಗತ್ಯ ಸುಲಭವಾಗಿ ಪೂರೈಸಬಹುದು ಎಂದು ತಜ್ಞರು ಸಲಹೆ ನೀಡುತ್ತಿದ್ದಾರೆ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft