News

ED ದಾಳಿ ವೇಳೆ ಕಂತೆ ಕಂತೆ ಹಣ, ಚಿನ್ನ ಪತ್ತೆ – ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಅರೆಸ್ಟ್

ಚಿತ್ರದುರ್ಗ: ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ (Veerendra Puppy) ಮನೆ ಮೇಲೆ ಇ.ಡಿ ದಾಳಿ ನಡೆಸಿದ ಸಂದರ್ಭ ಕಂತೆ ಕಂತೆ ಹಣ, ಚಿನ್ನ ಹಾಗೂ ಬೆಳ್ಳಿ ಪತ್ತೆಯಾದ ಹಿನ್ನೆಲೆ ವೀರೇಂದ್ರ ಪಪ್ಪಿಯವರನ್ನು ಸಿಕ್ಕಿಂನ (Sikkim) ಗ್ಯಾಂಗ್‌ಟಕ್‌ನಲ್ಲಿ ಬಂಧಿಸಲಾಗಿದೆ.

ಈಗಾಗಲೇ ವೀರೇಂದ್ರ ಪಪ್ಪಿಯವರನ್ನು ಅರೆಸ್ಟ್ ಮಾಡಿ ಕೋರ್ಟ್ಗೆ ಹಾಜರುಪಡಿಸಿರುವ ಇ.ಡಿ ಟ್ರಾನ್ಸಿಟ್ ವಾರೆಂಟ್ ಮೇಲೆ ಬೆಂಗಳೂರು ಕೋರ್ಟ್ಗೆ ಹಾಜರುಪಡಿಸಲಿದ್ದಾರೆ. 

– 12 ಕೋಟಿ ನಗದು, 6 ಕೋಟಿ ಮೌಲ್ಯದ ಚಿನ್ನ, 10 ಕೆ.ಜಿ ಬೆಳ್ಳಿ ವಶಕ್ಕೆ ಪಡೆದ ಇ.ಡಿ

ಚಿತ್ರದುರ್ಗ: ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ (Veerendra Puppy) ಮನೆ ಮೇಲೆ ಇ.ಡಿ ದಾಳಿ ನಡೆಸಿದ ಸಂದರ್ಭ ಕಂತೆ ಕಂತೆ ಹಣ, ಚಿನ್ನ ಹಾಗೂ ಬೆಳ್ಳಿ ಪತ್ತೆಯಾದ ಹಿನ್ನೆಲೆ ವೀರೇಂದ್ರ ಪಪ್ಪಿಯವರನ್ನು ಸಿಕ್ಕಿಂನ (Sikkim) ಗ್ಯಾಂಗ್‌ಟಕ್‌ನಲ್ಲಿ ಬಂಧಿಸಲಾಗಿದೆ.

ಈಗಾಗಲೇ ವೀರೇಂದ್ರ ಪಪ್ಪಿಯವರನ್ನು ಅರೆಸ್ಟ್ ಮಾಡಿ ಕೋರ್ಟ್ಗೆ ಹಾಜರುಪಡಿಸಿರುವ ಇ.ಡಿ ಟ್ರಾನ್ಸಿಟ್ ವಾರೆಂಟ್ ಮೇಲೆ ಬೆಂಗಳೂರು ಕೋರ್ಟ್ಗೆ ಹಾಜರುಪಡಿಸಲಿದ್ದಾರೆ. 

ಅಕ್ರಮ ಆನ್‌ಲೈನ್ ಮತ್ತು ಆಫ್‌ಲೈನ್ ಬೆಟ್ಟಿಂಗ್‌ಗೆ ಸಂಬಂಧಿಸಿದಂತೆ ಶುಕ್ರವಾರ ಮುಂಜಾನೆ ಚಿತ್ರದುರ್ಗದ ಕಾಂಗ್ರೆಸ್ ಶಾಸನ ವೀರೇಂದ್ರ ಪಪ್ಪಿ ಮತ್ತು ಇತರರ ಮೇಲೆ ಒಟ್ಟು 30 ಸ್ಥಳಗಳಲ್ಲಿ ದಾಳಿ ನಡೆಸಿ ಇ.ಡಿ ದಾಖಲೆ ಪರಿಶೀಲನೆ ಮಾಡಿದೆ. ಈ ವೇಳೆ 12 ಕೋಟಿ ನಗದು, 1 ಕೋಟಿ ವಿದೇಶಿ ಹಣ, 6 ಕೋಟಿ ಮೌಲ್ಯದ ಚಿನ್ನ, 10 ಕೆಜಿ ಬೆಳ್ಳಿ, 17 ಬ್ಯಾಂಕ್ ಖಾತೆ ಹಾಗೂ 2 ಬ್ಯಾಂಕ್ ಲಾಕರ್‌ಗಳನ್ನು ಇ.ಡಿ ಸೀಜ್ ಮಾಡಿದೆ
ಚಿತ್ರದುರ್ಗ ಜಿಲ್ಲೆಯಾದ್ಯಂತ 6, ಬೆಂಗಳೂರು ನಗರ 10, ಜೋಧ್‌ಪುರ 3, ಹುಬ್ಬಳ್ಳಿ 1, ಮುಂಬೈ 2 ಮತ್ತು ಗೋವಾದಲ್ಲಿರುವ ಪಪ್ಪೀಸ್ ಕ್ಯಾಸಿನೊ ಗೋಲ್ಡ್, ಓಷನ್ ರಿವರ್ಸ್ ಕ್ಯಾಸಿನೊ, ಪಪ್ಪೀಸ್ ಕ್ಯಾಸಿನೊ ಪ್ರೈಡ್, ಓಷನ್ 7 ಕ್ಯಾಸಿನೊ, ಬಿಗ್ ಡ್ಯಾಡಿ ಕ್ಯಾಸಿನೊಗಳ ಮೇಲೆ ದಾಳಿ ನಡೆಸಲಾಗಿದೆ. ವೀರೇಂದ್ರ ಪಪ್ಪಿ ಕಿಂಗ್ 567, ರಾಜ 567, ಪಪ್ಪೀಸ್ 003, ರತ್ನ ಗೇಮಿಂಗ್ ಇತ್ಯಾದಿಗಳ ಹೆಸರಿನಲ್ಲಿ ಹಲವಾರು ಆನ್‌ಲೈನ್ ಬೆಟ್ಟಿಂಗ್ ಸೈಟ್‌ಗಳನ್ನು ನಡೆಸುತ್ತಿದ್ದಾರೆ.

1 ಕೋಟಿ ಫಾರಿನ್ ಕರೆನ್ಸಿ ಪತ್ತೆ
ಇದಲ್ಲದೇ ಎಂಜಿಎಂ ಕ್ಯಾಸಿನೊ, ಮೆಟ್ರೋಪಾಲಿಟನ್ ಕ್ಯಾಸಿನೊ, ಬೆಲಾಜಿಯೊ ಕ್ಯಾಸಿನೊ, ಮರೀನಾ ಕ್ಯಾಸಿನೊದಲ್ಲಿ ಕ್ಯಾಸಿನೊ ಆಭರಣ, ವಿವಿಧ ಬ್ಯಾಂಕುಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳು, ತಾಜ್, ಹಯಾತ್ ಮತ್ತು ಲೀಲಾ ಪಂಚತಾರಾ ಹೋಟೆಲ್‌ಗಳ ಐಷಾರಾಮಿ ಆತಿಥ್ಯ ಸದಸ್ಯತ್ವ ಕಾರ್ಡ್‌ಗಳು, 6 ಕೋಟಿ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ. ಇದರ ಜೊತೆಗೆ ಐಷಾರಾಮಿ ಕಾರು, 12 ಕೋಟಿ ಮೌಲ್ಯದ ಇಂಡಿಯನ್ ಕರೆನ್ಸಿ, 1 ಕೋಟಿ ಫಾರಿನ್ ಕರೆನ್ಸಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft