ಸಿನಿಮಾ

ಪೈರಸಿಯಲ್ಲೂ ದಾಖಲೆ ಬರೆದ ‘ಡೆವಿಲ್’; 10 ಸಾವಿರ ಲಿಂಕ್ ಡಿಲೀಟ್

‘ಡೆವಿಲ್’ ಕನ್ನಡ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ಭಾರಿ ಪೈರಸಿ ಕಾಟಕ್ಕೆ ಸಿಲುಕಿದೆ. ಚಿತ್ರತಂಡ ಇದುವರೆಗೆ 10,000ಕ್ಕೂ ಹೆಚ್ಚು ಪೈರಸಿ ಲಿಂಕ್‌ಗಳನ್ನು ಡಿಲೀಟ್ ಮಾಡಿಸಿದೆ. ಥಿಯೇಟರ್‌ನಲ್ಲಿ ಸಿನಿಮಾ ನೋಡುವಂತೆ ಮನವಿ ಮಾಡಿದೆ. ವಿಶ್ವದಲ್ಲೇ ಒಂದು ಚಿತ್ರಕ್ಕೆ ಇಷ್ಟು ದೊಡ್ಡ ಪ್ರಮಾಣದ ಪೈರಸಿ ನಡೆದಿರುವುದು ಇದೇ ಮೊದಲು ಎಂದು ತಂಡ ಹೇಳಿದೆ. ಈ ವೈರಸ್‌ನಿಂದ ಚಿತ್ರೋದ್ಯಮಕ್ಕೆ ಭಾರಿ ನಷ್ಟವಾಗುತ್ತಿದೆ.

ಡೆವಿಲ್’ ಸಿನಿಮಾವು ಡಿಸೆಂಬರ್ 11ರಂದು ರಿಲೀಸ್ ಆಗಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಅಂದುಕೊಂಡ ಮಟ್ಟಿಗೆ ಸಿನಿಮಾ ಗಳಿಕೆ ಮಾಡುತ್ತಿಲ್ಲ ಎನ್ನಲಾಗುತ್ತಿದೆ. ಹೀಗಿರುವಾಗಲೇ ಈ ಸಿನಿಮಾ ನಿರ್ಮಾಣ ಮಾಡಿದ ಸಂಸ್ಥೆ ಕಡೆಯಿಂದ ಒಂದು ಶಾಕಿಂಗ್ ವಿಷಯ ಬೆಳಕಿಗೆ ಬಂದಿದೆ. ಒಂದಲ್ಲ, ಎರಡಲ್ಲ, ಡೆವಿಲ್ ಸಿನಿಮಾದ 10 ಸಾವಿರ ಪೈರಸಿ ಲಿಂಕ್​ನ ಡಿಲೀಟ್ ಮಾಡಲಾಗಿದೆಯಂತೆ.

ಕನ್ನಡ ಸಿನಿಮಾಗಳು ಓಡುತ್ತಿಲ್ಲ ಎಂಬ ಮಾತು ಆಗಾಗ ಹೇಳುವುದನ್ನು ಕೇಳಿರಬಹುದು. ಈ ಮಧ್ಯೆ ಸಿನಿಮಾಗಳಿಗೆ ಪೈರಸಿ ಮಾರಕವಾಗುತ್ತಾ ಇದೆ. ಥಿಯೇಟರ್​ನಲ್ಲಿ ಜನರು ಸಿನಿಮಾ ನೋಡಲಿ ಎಂದು ಮಾಡಲಾಗುತ್ತದೆ. ಆದರೆ, ಕೆಲವರು ಪೈರಸಿ ಮಾಡುತ್ತಾರೆ. ಸಿನಿಮಾ ಥಿಯೇಟರ್​​ನಲ್ಲಿ ಇರುವಾಗಲೇ ಚಿತ್ರವನ್ನು ರೆಕಾರ್ಡ್ ಮಾಡಿ ಹರಿಬಿಡುತ್ತಾರೆ. ‘ಡೆವಿಲ್​’ಗೂ ಪೈರಸಿ ಕಾಟ ತಾಗಿದೆ.

‘ಡೆವಿಲ್’ ಸಿನಿಮಾ ರಿಲೀಸ್ ಆದ ಮರುದಿನವೇ ಎಚ್​​ಡಿ ಪ್ರಿಂಟ್ ಲೀಕ್ ಆಗಿದೆ. ಇದು ತಂಡಕ್ಕೆ ಚಿಂತೆ ಉಂಟು ಮಾಡಿದೆ. ಆ ಬಳಿಕ ನಿರಂತರವಾಗಿ ಪೈರಸಿ ಲಿಂಕ್​​ನ ತೆಗೆಸೋ ಕೆಲಸ ಆಗಿದೆ. ಡೆವಿಲ್ ಚಿತ್ರತಂಡದಿಂದ ಈ ಬಗ್ಗೆ ಅಧಿಕೃತ ಪೋಸ್ಟ್ ಹಾಕಲಾಗಿದೆ

ಪೈರಸಿ ಅನ್ನೋದು ವೈರಸ್. ಇದು ಸಿನಿಮಾನ ಕೊಲ್ಲುತ್ತದೆ. ನಾವು ಇನ್ನೂ ಯುದ್ಧ ಮಾಡುತ್ತಲೇ ಇದ್ದೇವೆ. ಈವರೆಗೂ 10500ಕ್ಕೂ ಹೆಚ್ಚು ಪೈರಸಿ ಲಿಂಕ್ ಗಳನ್ನ ಡಿಲಿಟ್ ಮಾಡುವ ಕೆಲಸ ಆಗಿದೆ. ದಯವಿಟ್ಟು ಪೈರಸಿ ಮಾಡಬೇಡಿ. ಸಿನಿಮಾ ಥಿಯೇಟರ್ ನಲ್ಲಿ ನೋಡಿ’ ಎಂದು ತಂಡ ಮನವಿ ಮಾಡಿದೆ. ಸಿನಿಮಾ ಒಂದಕ್ಕೆ ಇಷ್ಟು ಪೈರಸಿ ಲಿಂಕ್ ಸೃಷ್ಟಿ ಆಗಿರೋದು ವಿಶ್ವ ಮಟ್ಟದಲ್ಲಿ ಇದೇ ಮೊದಲು ಎಂದು ತಂಡ ಹೇಳಿದೆ.

Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft