News

ಬಿಗ್ ಬಾಸ್:ರಕ್ಷಿತಾ ಶೆಟ್ಟಿ ಪರವಾಗಿ ನಿಂತು ಅಶ್ವಿನಿ ಗೌಡ ವಿರುದ್ಧ ತಿರುಗಿಬಿದ್ದ ಗಿಲ್ಲಿ ನಟ.

ಬಿಗ್ ಬಾಸ್ ಸೀಸನ್ 12 : ರಕ್ಷಿತಾ ಶೆಟ್ಟಿಯನ್ನು ಇದುವರೆಗೆ ಅಶ್ವಿನಿ ಗೌಡ ಟಾರ್ಗೆಟ್ ಮಾಡಿರುವುದು ಗುಟ್ಟಾಗಿ ಉಳಿದಿಲ್ಲ . ಆದರೆ ರಕ್ಷಿತಾ ಶೆಟ್ಟಿ ಅವರು  ಮನೆಯಲ್ಲಿ ಬುದ್ಧಿವಂತಿಕೆಯಿಂದ ಆಟ ಆಡುತ್ತಿದ್ದಾರೆ. ರಕ್ಷಿತಾ ಶೆಟ್ಟಿ ಪರವಾಗಿ ಬಿಗ್ ಬಾಸ್ ಮನೆಯ ಕೆಲವರು ನಿಂತಿದ್ದಾರೆ. ಗಿಲ್ಲಿ ನಟ ಅವರು ಮೊದಲಿನಿಂದಲೂ ರಕ್ಷಿತಾ ಪರ ವಹಿಸುತ್ತಿದ್ದಾರೆ. ನವೆಂಬರ್ 3ರ ಸಂಚಿಕೆಯಲ್ಲಿ ಕೂಡ ಇದೇ ರೀತಿ ಆಗಿದೆ. ಈ ಮೊದಲು ರಕ್ಷಿತಾ ಶೆಟ್ಟಿ ಹೇಳಿದ್ದ ಮಾತನ್ನು ಅಶ್ವಿನಿ ಗೌಡ ಅವರು ತಮಗೆ ಬೇಕಾದಂತೆ ತಿರುಚಿದ್ದರು. ಆ ವಿಚಾರಕ್ಕೆ ಗಿಲ್ಲಿ ನಟ ವಿರೋಧ ವ್ಯಕ್ತಪಡಿಸಿದ್ದಾರೆ. ಸಾಕ್ಷಿ ಸಮೇತವಾಗಿ ಅಶ್ವಿನಿ ಗೌಡ ಅವರ ತಪ್ಪನ್ನು ಗುರುತಿಸಿ ಬಳಿಕ ಅವರ ಮುಖಕ್ಕೆ ಗಿಲ್ಲಿ ನಟ ಮಸಿ ಬಳಿದಿದ್ದಾರೆ.

ತುಳುನಾಡಿನ ಹುಡುಗಿ ಎಂದೇ ಖ್ಯಾತರಾಗಿರುವ ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮನೆಗೆ 4ನೇ ಸ್ಪರ್ಧಿಯಾಗಿ ಪ್ರವೇಶಿಸಿದರು, ಆದರೆ ಮೊದಲ ದಿನವೇ ಎಲಿಮಿನೇಟ್ ಆಗಿ ಹೊರಬಂದಿದ್ದರು. ಸಾರ್ವಜನಿಕರ ಒತ್ತಾಯ ಮತ್ತು ಪ್ರತಿಕ್ರಿಯೆಯಿಂದಾಗಿ, ಅವರಿಗೆ ಎರಡನೇ ಅವಕಾಶ ನೀಡಿ ಮತ್ತೆ ಮನೆಗೆ ಕಳುಹಿಸಲಾಗಿತ್ತು.ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ತಮ್ಮ ಸಹಜ ಹಾಸ್ಯ ಮತ್ತು ವರ್ತನೆಯಿಂದ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಮತ್ತು ಗಿಲ್ಲಿ ನಟ ನಡುವೆ ಉತ್ತಮ ಒಡನಾಟ ಬೆಳೆದಿದ್ದು ಸುದ್ದಿಯಾಗುತ್ತಿದೆ.

ನವೆಂಬರ್ 3ರ ಸಂಚಿಕೆಯಲ್ಲಿ ಕೂಡ ಇದೇ ರೀತಿ ಆಗಿದೆ. ಈ ಮೊದಲು ರಕ್ಷಿತಾ ಶೆಟ್ಟಿ ಹೇಳಿದ್ದ ಮಾತನ್ನು ಅಶ್ವಿನಿ ಗೌಡ ಅವರು ತಮಗೆ ಬೇಕಾದಂತೆ ತಿರುಚಿದ್ದರು. ಆ ವಿಚಾರಕ್ಕೆ ಗಿಲ್ಲಿ ನಟ ವಿರೋಧ ವ್ಯಕ್ತಪಡಿಸಿದ್ದಾರೆ. ಸಾಕ್ಷಿ ಸಮೇತನಾಗಿ ಅಶ್ವಿನಿ ಗೌಡ ಅವರು ತಪ್ಪನ್ನು ಬೊಟ್ಟು ಮಾಡಿ ತೋರಿಸಿದ್ದಾರೆ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft