News

ನಾಳೆ ಬಿಸಿಸಿ(BCC) ಬೆಂಗಳೂರು ನೂತನ ಕಚೇರಿ ಉದ್ಘಾಟನೆ

ಬೆಂಗಳೂರು ಬ್ಯಾರಿಗಳ ಬಹುನಿರೀಕ್ಷಿತ ಬ್ಯಾರೀಸ್ ಸೆಂಟ್ರಲ್ ಕಮೀಟಿ ಬೆಂಗಳೂರು(ರಿ) ಇದರ ಕಚೇರಿ ಉದ್ಘಾಟನಾ ಕಾರ್ಯಕ್ರಮ ನಾಳೆ ಸಂಜೆ 5;00ಕ್ಕೆ ಹಿಂದೂಸ್ತಾನ್ ಹೋಟೆಲ್ ಕಾಂಪ್ಲೆಕ್ಸ್ ಮೆಜೆಸ್ಟಿಕ್ ನಲ್ಲಿ ನಡೆಯಲಿದೆ.

ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಸನ್ಮಾನ್ಯ ಸಭಾಪತಿಗಳಾದ ಯು.ಟಿ ಖಾದರ್,ಅರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾದ ಇನಾಯತ್ ಅಲಿ,ಮತ್ತಿತರ ಗಣ್ಯ ವ್ಯಕ್ತಿಗಳು ಬ್ಯಾರೀಸ್ ಸೆಂಟ್ರಲ್ ಕಮಿಟಿಯು ವ್ಯಾಪಾರ, ಉದ್ಯೋಗ, ಶಿಕ್ಷಣ ಮುಂತಾದ ವಿವಿಧ ಕಾರಣ ಬೆಂಗಳೂರಿಗೆ ಬಂದು ನೆಲೆಸಿರುವ ಬ್ಯಾರಿಗಳ ಸಬಲೀಕರಣಕ್ಕಾಗಿ ಸ್ಥಾಪಿಸಿರುವ ಸಂಘಟನೆಯಾಗಿದೆ ಬ್ಯಾರಿ ಸೆಂಟ್ರಲ್ ಕಮಿಟಿ
ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ,ಹಲವಾರು ವರ್ಷಗಳಿಂದ ಪರಸ್ಪರ ಸಂಪರ್ಕದಲ್ಲಿದ್ದು, ಸಂಘಟಿತ ರೀತಿಯಲ್ಲಿ ಕೆಲಸ ಮಾಡುತ್ತಿದ್ದ ಈ ಬದ್ಧ ಬ್ಯಾರಿಗಳ ಗುಂಪು ಅಧಿಕೃತವಾಗಿ “ಬ್ಯಾರೀಸ್ ಸೆಂಟ್ರಲ್ ಕಮಿಟಿ”ಯಾಗಿ ರೂಪುಗೊಂಡಿತ್ತು.

ಭಾಗವಹಿಸಲಿದ್ದಾರೆ ಹಾಗೂ ಸಮಾರಂಭದಲ್ಲಿ ಸನ್ಮಾನ್ಯ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ ಎ ಗಫೂರ್ , ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಶಾಹಿದ್ ತೆಕ್ಕಿಲ್, ಅನಿವಾಸಿ ಕನ್ನಡಿಗ ಉದ್ಯಮಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಝಕರಿಯಾ ಜೋಕಟ್ಟೆ ಹಿರಿಯ ಪತ್ರಕರ್ತ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ ಎಂ ಹನೀಫ್ ಮುಂತಾದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮವ ಜರುಗಲಿದೆ.

ಈ ಬ್ಯಾರಿಸ್ ಸೆಂಟ್ರಲ್ ಕಮಿಟಿಯ ಕಾರ್ಯಾಚರಣೆಗಳಿಗೆ ಬೇಕಾಗಿ ಒಂದು ಸುಸಜ್ಜಿತ ಕಛೇರಿಯನ್ನು ನಿರ್ಮಿಸುವುದು ಸಂಘಟನೆಯ ಕನಸಾಗಿತ್ತು. ಆತ್ಮೀಯ ನಾಯಕರು ಹಾಗೂ ಹಲವಾರು ಬ್ಯಾರಿ ಸಹೋದರರ‌ ನೆರವಿನಿಂದ ಆ ಕನಸು ನನಸಾಗುವ ಕಾಲ ಕೂಡಿ ಬಂದಿದೆ. ಬೆಂಗಳೂರಿನ ಹೃದಯ ಭಾಗ ಮೆಜೆಸ್ಟಿಕ್ ನಲ್ಲಿ ಒಂದು ಸುಂದರ ಸುಸಜ್ಜಿತವಾದ ಬ್ಯಾರಿಸಾ ಸೆಂಟ್ರಲ್ ಕಮಿಟಿಯ ನೂತನ ಕಛೇರಿ ನಿರ್ಮಾಣವಾಗಿದೆ. ಪ್ರಸ್ತುತ ಕಛೇರಿಯ ಉದ್ಘಾಟನಾ ಸಮಾರಂಭವು ,ನಾಳೆ ನವೆಂ.5)ಸಂಜೆ ಸನ್ಮಾನ್ಯ ವಿಧಾನಸಭಾ ಅಧ್ಯಕ್ಷ ಯುಟಿ ಖಾದರ್, ಅನಿವಾಸಿ ಕನ್ನಡಿಗ ಉದ್ಯಮಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಝಕರಿಯಾ ಜೋಕಟ್ಟೆ ಹಾಗೂ ಇತ್ಯಾದಿ ಅನೇಕ ಸಾಮಾಜಿಕ, ರಾಜಕೀಯ, ಧಾರ್ಮಿಕ ಸಮ್ಮುಖದಲ್ಲಿ ನಡೆಯಲಿದೆ .

ಸಂಸ್ಥೆಯು ರಾಜಕೀಯ ಮತ್ತು ಸಂಘಟನೆಗಳ ವ್ಯತ್ಯಾಸಗಳನ್ನು ಮೀರಿ, ಬೆಂಗಳೂರಿನ ಎಲ್ಲಾ ಬ್ಯಾರಿಗಳನ್ನು ಒಂದೇ ಸಮುದಾಯವಾಗಿ ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದೆ. ಇದರ ಆಶ್ರಯದಲ್ಲಿ ಇದುವರೆಗೆ ಹಲವಾರು ಸಾಮಾಜಿಕ, ಜವಾಬ್ದಾರಿಯುತ ಸೇವೆಗಳನ್ನು ಕೊಡುಗೆ ನೀಡಿದೆ.

ಸಂಸ್ಥೆಯು ಬೆಂಗಳೂರಿನ ಬ್ಯಾರಿ ಯುವಕರು ಮತ್ತು ಕುಟುಂಬಗಳಲ್ಲಿ ಮತದಾನದ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸಿದೆ. ಅವರು ದಕ್ಷಿಣ ಕನ್ನಡ ಜಿಲ್ಲೆಯ ಮತದಾರರಿಗೆ ಚುನಾವಣೆಯಲ್ಲಿ ಪಾಲ್ಗೊಳ್ಳುವ ಮಹತ್ವವನ್ನು ತಿಳಿಸಿ. ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಬ್ಯಾರಿಗಳಿಗೆ ಚುನಾವಣಾ ದಿನದಂದು ರಜೆ ನೀಡುವಂತೆ ಅವರ ಉದ್ಯೋಗದಾತರೊಂದಿಗೆ ಚರ್ಚೆ ನಡೆಸಿ ಸಹಕಾರ ಪಡೆದರು. ಮತದಾನದ ಪ್ರಮಾಣ ಹೆಚ್ಚಿಸಲು, ಸಂಸ್ಥೆಯು ಸುಮಾರು 30 ಉಚಿತ ಬಸ್‌ಗಳನ್ನು ವ್ಯವಸ್ಥೆ ಮಾಡಿತು, ಇದರ ಮೂಲಕ ಹೆಚ್ಚು ಮಂದಿ ಮತಚಲಾಯಿಸುವಂತೆ ಮಾಡಿತ್ತು.ರಾಜ್ಯ ಚುನಾವಣಾ ಆಯುಕ್ತರೊಂದಿಗೆ ಸಭೆ ನಡೆಸುವಂತೆ ವಿನಂತಿಸಿ, ಖಾಸಗಿ ಉದ್ಯೋಗಿಗಳಿಗೂ ಚುನಾವಣಾ ದಿನದಂದು ರಜೆ ನೀಡುವ ಕ್ರಮ ಕೈಗೊಳ್ಳುವಂತೆ ಪ್ರಸ್ತಾಪಿಸಿತ್ತು.

Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft