Sports

479 ಎಸೆತಗಳನ್ನು ಎದುರಿಸಿ ಹೀನಾಯವಾಗಿ ಸೋತ ಆಸ್ಟ್ರೇಲಿಯಾ

Australia vs England: ಮೆಲ್ಬೋರ್ನ್​​ನ ಎಂಸಿಜಿ ಸ್ಟೇಡಿಯಂನಲ್ಲಿ ನಡೆದ ಆ್ಯಶಸ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು 152 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಇಂಗ್ಲೆಂಡ್ 110 ರನ್​​​ಗಳಿಗೆ ಆಲೌಟ್ ಆಗಿದೆ. ಇದರ ಬೆನ್ನಲ್ಲೇ ದ್ವಿತೀಯ ಇನಿಂಗ್ಸ್ ಶುರು ಮಾಡಿದ ಆಸ್ಟ್ರೇಲಿಯಾ ತಂಡವು 134 ರನ್​್ಗಳಿಸಲಷ್ಟೇ ಶಕ್ತರಾಗಿದ್ದರು. ಅದರಂತೆ 175 ರನ್​​ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ 4 ವಿಕೆಟ್​ಗಳ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಆಸ್ಟ್ರೇಲಿಯಾದಲ್ಲಿ ಆಸೀಸ್ ಪಡೆಯನ್ನು ಬಗ್ಗು ಬಡಿಯುವಲ್ಲಿ ಕೊನೆಗೂ ಇಂಗ್ಲೆಂಡ್ ತಂಡ ಯಶಸ್ವಿಯಾಗಿದೆ. ಅದು ಕೂಡ ಕೇವಲ 479 ಎಸೆತಗಳಲ್ಲಿ ಕಟ್ಟಿ ಹಾಕುವ ಮೂಲಕ ಎಂಬುದು ವಿಶೇಷ. ಅಂದರೆ ಎರಡೂ ಇನಿಂಗ್ಸ್​​ಗಳ ಮೂಲ ಆಸ್ಟ್ರೇಲಿಯಾ ಬ್ಯಾಟರ್​​ಗಳು ಎದುರಿಸಿದ್ದು ಕೇವಲ 479 ಎಸೆತಗಳನ್ನು ಮಾತ್ರ.

ಮೊದಲ ಇನಿಂಗ್ಸ್​​ನಲ್ಲಿ 45.2 ಓವರ್​ಗಳನ್ನು ಎದುರಿಸಿದ್ದ ಆಸ್ಟ್ರೇಲಿಯಾ ಬ್ಯಾಟರ್​ಗಳು ದ್ವಿತೀಯ ಇನಿಂಗ್ಸ್​ನಲ್ಲಿ 34/3 ಓವರ್​​ಗಳಲ್ಲಿ ಆಲೌಟ್ ಆಗಿದ್ದರು. ಈ ಮೂಲಕ ಇಂಗ್ಲೆಂಡ್ ತಂಡವು 479 ಎಸೆತಗಳಲ್ಲಿ ಆಸೀಸ್ ಪಡೆಯನ್ನು ಕಟ್ಟಿ ಹಾಕುವಲ್ಲಿ ಇಂಗ್ಲೆಂಡ್ ಬೌಲರ್​ಗಳು ಯಶಸ್ವಿಯಾಗಿದ್ದರು.

ವಿಶೇಷ ಎಂದರೆ ಇದು 97 ವರ್ಷಗಳಲ್ಲೇ ಆಸ್ಟ್ರೇಲಿಯಾ ತಂಡದ ಅತ್ಯಂತ ಕಳಪೆ ಪ್ರದರ್ಶನವಾಗಿದೆ. ಅಂದರೆ ಟೆಸ್ಟ್ ಪಂದ್ಯವೊಂದರಲ್ಲಿ ಆಸ್ಟ್ರೇಲಿಯಾ ತಂಡ 500 ಕ್ಕಿಂತ ಕಡಿಮೆ ಎಸೆತಗಳನ್ನು ಎದುರಿಸುತ್ತಿರುವುದು 5ನೇ ಬಾರಿ. ಇದಕ್ಕೂ ಮುನ್ನ 1928 ರಲ್ಲಿ ಇಂಗ್ಲೆಂಡ್ ವಿರುದ್ಧ 457 ಎಸೆತಗಳಲ್ಲಿ ಎರಡೂ ಇನಿಂಗ್ಸ್​​​ಗಳನ್ನೂ ಕೊನೆಗೊಳಿಸಿದ್ದರು

ಇದೀಗ ಬರೋಬ್ಬರಿ 97 ವರ್ಷಗಳ ಬಳಿಕ ಇಂಗ್ಲೆಂಡ್ ತಂಡವು ಮತ್ತೊಮ್ಮೆ ಆಸ್ಟ್ರೇಲಿಯಾ ತಂಡವನ್ನು 479 ಎಸೆತಗಳಲ್ಲಿ ನಿಯಂತ್ರಿಸಿದೆ. ಈ ನಿಯಂತ್ರಣದೊಂದಿಗೆ ಆಸ್ಟ್ರೇಲಿಯಾ ತಂಡಕ್ಕೆ ಹೀನಾಯ ಸೋಲುಣಿಸುವಲ್ಲಿಯೂ ಯಶಸ್ವಿಯಾಗಿದೆ. ಅದು ಕೂಡ ದಶಕಗಳ ಬಳಿಕ ಎಂಬುದು ಮತ್ತೊಂದು ವಿಶೇಷ.

ಅಂದರೆ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾದಲ್ಲಿ ಕೊನೆಯ ಟೆಸ್ಟ್ ಪಂದ್ಯ ಗೆದ್ದಿದ್ದು 2011 ರಲ್ಲಿ. ಇದಾದ ಬಳಿಕ ಆಂಗ್ಲರ ಪಡೆ ಕಾಂಗರೂನಾಡಿನಲ್ಲಿ ಕಣಕ್ಕಿಳಿದ 18 ಮ್ಯಾಚ್​​​ಗಳಲ್ಲಿ 16 ಪಂದ್ಯಗಳಲ್ಲಿ ಸೋಲುಂಡಿದ್ದರು. ಇನ್ನು ಎರಡು ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿತ್ತು. ಇದೀಗ 14 ವರ್ಷಗಳ ಬಳಿಕ ಆಸ್ಟ್ರೇಲಿಯಾ ಪಿಚ್​​​ನಲ್ಲಿ ಇಂಗ್ಲೆಂಡ್ ತಂಡ 4 ವಿಕೆಟ್​​ಗಳ ಸ್ಮರಣೀಯ ಗೆಲುವು ದಾಖಲಿಸಿದೆ.

Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft