News

ಸವಿತಾ ಸಮಾಜದ ಬಗ್ಗೆ ’ಆಕ್ಷೇಪಾರ್ಹ’ ಪದ ಬಳಕೆ ಆರೋಪ: ಕ್ಷಮೆಯಾಚಿಸಿದ ಸಿಟಿ ರವಿ

ಬೆಂಗಳೂರು, (ಅಕ್ಟೋಬರ್ 30): ಬೆಳಗಾವಿ ಚಳಿಗಾಲದ ಅಧಿವೇಶನದ ವೇಳೆ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿಟಿ ರವಿ ಅವರು ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಬಾರೀ ಸಂಚಲನಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಇದೀಗ ಸಿಟಿ ರವಿ ಅವರು ಫೋನ್ ಸಂಭಾಷಣೆ ವೇಳೆ ಸವಿತಾ ಸಮಾಜದ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಕಾಂಗ್ರೆಸ್ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಹೀಗಾಗಿ ಇದು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತ ಸಿಟಿ ರವಿ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಇದರ ಜೊತೆ ಕ್ಷಮೆ ಸಹ ಕೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿಂದು ಮಾತನಾಡಿರುವ ಸಿಟಿ ರವಿ, ಪ್ರತ್ಯಕ್ಷವಾಗಿಯಾಗಲಿ, ಪರೋಕ್ಷವಾಗಿಯಾಗಲಿ ನನ್ನ ಕಡೆಯಿಂದ ಯಾರಿಗಾದ್ರೂ ನೋವಾಗಿದ್ರೆ ಕ್ಷಮೆ ಯಾಚಿಸುತ್ತೇನೆ. ನಮ್ಮ‌ ಮನೆ, ಮನದಲ್ಲಿ ಜಾತೀಯತೆ, ಅಸ್ಪೃಶ್ಯತೆಗೆ ಜಾಗ ಕೊಟ್ಟಿಲ್ಲ. ನಾನು ಜಾತಿಯೊಂದಿಗೆ ಯಾವತ್ತೂ ರಾಜಕಾರಣವನ್ನ ಮಾಡಿಲ್ಲ. ಸವಿತಾ ಸಮಾಜವನ್ನ ನಾನು ಅಪಮಾನಿಸುವ ಕೆಲಸ ಮಾಡಿಲ್ಲ. ಆ ರೀತಿ ಬಿಂಬಿಸುವ‌ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft