ಸಿನಿಮಾ

ಈ ಸಿನಿಮಾ ದಾಖಲೆ ಮುರಿಯೋದು ‘ಧುರಂಧರ್ 2’ ಚಿತ್ರಕ್ಕೆ ಅಸಾಧ್ಯ?

ರಣವೀರ್ ಸಿಂಗ್ ನಟನೆಯ ‘ಧುರಂಧರ್ 2’ ಚಿತ್ರವು ವಿಶ್ವಾದ್ಯಂತ 1772.94 ಕೋಟಿ ರೂ. ಗಳಿಸಿ, ಭಾರತೀಯ ಚಿತ್ರಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಬಾಹುಬಲಿ 2 ಮತ್ತು ಪುಷ್ಪ 2 ಚಿತ್ರಗಳ ದಾಖಲೆಗಳನ್ನು ಮುರಿಯಲು ಈ ಚಿತ್ರಕ್ಕೆ ಇನ್ನೂ ದೊಡ್ಡ ಸವಾಲುಗಳಿವೆ. ‘ಧುರಂಧರ್ 2’ ಶೀಘ್ರದಲ್ಲೇ ಜಿಯೋ ಹಾಟ್‌ಸ್ಟಾರ್‌ನಲ್ಲಿ ಒಟಿಟಿ ಬಿಡುಗಡೆ ಆಗಲಿದೆ. ದಾಖಲೆಗಳ ಪಯಣ ಸವಾಲಿನಿಂದ ಕೂಡಿದೆ.

ಈ ಸಿನಿಮಾ ದಾಖಲೆ ಮುರಿಯೋದು ‘ಧುರಂಧರ್ 2’ ಚಿತ್ರಕ್ಕೆ ಅಸಾಧ್ಯ?

ಕಳೆದ ತಿಂಗಳು ಬಿಡುಗಡೆಯಾದ ಆದಿತ್ಯ ಧಾರ್ ನಿರ್ದೇಶನದ, ರಣವೀರ್ ಸಿಂಗ್ ನಟನೆಯ ‘ಧುರಂಧರ್: ದಿ ರಿವೆಂಜ್’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸಿತು. ಬಿಡುಗಡೆಯ ಹಿಂದಿನ ದಿನ ಪೇಯ್ಡ್ ಪ್ರಿವ್ಯೂದಿಂದಲೇ ಪ್ರೇಕ್ಷಕರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಡಿಸೆಂಬರ್ 5 ರಂದು ಬಿಡುಗಡೆಯಾದ ಧುರಂಧರ್ ಚಿತ್ರವನ್ನು ಜನರು ಕೊಂಡಾಡಿದರು. ಈ ಸಿನಿಮಾ ವಿಶ್ವಾದ್ಯಂತ ದಾಖಲೆಯ ಮೇಲೆ ದಾಖಲೆ ಮಾಡುತ್ತಿದೆ.

‘ಧುರಂಧರ್ 2 ದಿ ರಿವೆಂಜ್’ ಮಾರ್ಚ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈಗ ಸಿನಿಮಾ ಏಪ್ರಿಲ್ 26ರಂದು 39 ದಿನವನ್ನು ಪೂರೈಸಿದೆ. ಧುರಂಧರ್ ಪ್ರಸ್ತುತ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಚಿತ್ರವು ಪ್ರೇಕ್ಷಕರು ಸಿನಿಮಾವನ್ನು ನೋಡುವ ವಿಧಾನವನ್ನು ಬದಲಾಯಿಸಿದೆ.

ಧುರಂಧರ್ 2 ಚಿತ್ರವು ಇಲ್ಲಿಯವರೆಗೆ ವಿಶ್ವಾದ್ಯಂತ 1772.94 ಕೋಟಿ ರೂ. ಗಳಿಸಿದೆ. ಎಸ್.ಎಸ್. ರಾಜಮೌಳಿ ಅವರ ‘ಬಾಹುಬಲಿ 2’ ಚಿತ್ರದ ಜಾಗತಿಕ ಗಳಿಕೆಯನ್ನು ಮೀರಿಸಲು ಈ ಚಿತ್ರಕ್ಕೆ ಇನ್ನೂ 15.72 ಕೋಟಿ ರೂ. ಅಗತ್ಯವಿದೆ. ‘ಬಾಹುಬಲಿ 2’ ವಿಶ್ವಾದ್ಯಂತ 1788.06 ಕೋಟಿ ರೂ. ಗಳಿಸಿದೆ.

ತೆಲುಗು ನಟ ಅರ್ಜುನ್ ಅವರ ‘ಪುಷ್ಪ 2’ ದೇಶಾದ್ಯಂತ ಭಾರಿ ಹಿಟ್ ಆಯಿತು. ಇದು ಪುಷ್ಪ ಚಿತ್ರದ ಎರಡನೇ ಭಾಗವಾಗಿತ್ತು. ಭಾರತದಲ್ಲಿ ‘ಪುಷ್ಪ 2’ ದಾಖಲೆಯನ್ನು ಮುರಿಯಲು ‘ಧುರಂಧರ್ 2’ಗೆ ಇನ್ನೂ 106 ಕೋಟಿ ಗಳಿಕೆ ಅಗತ್ಯವಿದೆ. ಭಾರತದಲ್ಲಿ ‘ಪುಷ್ಪ 2’ ದಾಖಲೆಯನ್ನು ಮುರಿಯಲು ‘ಧುರಂಧರ್ 2’ ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಅಥವಾ ಇದು ಅಸಾಧ್ಯ ಆಗಬಹುದು.

‘ಧುರಂದರ್ 2’ ಸಿನಿಮಾ ರಿಲೀಸ್ ಆದ 2 ತಿಂಗಳ ಬಳಿಕ ಒಟಿಟಿಗೆ ಬರಹುದು ಎಂದು ಊಹಿಸಲಾಗಿದೆ. ಜಿಯೋ ಹಾಟ್​ಸ್ಟಾರ್ ಮೂಲಕ ಸಿನಿಮಾ ಪ್ರಸಾರ ಆರಂಭಿಸಲಿದೆ.

‘ಧುರಂಧರ್ 2’ ಸಿನಿಮಾ ಜಿಯೋ ಹಾಟ್​​ಸ್ಟಾರ್ ಜೊತೆಗೆ ನೆಟ್​​ಫ್ಲಿಕ್ಸ್​ನಲ್ಲಿಯೂ ಬಿಡುಗಡೆ ಆಗಲಿದೆ  ಎಂದು ವರದಿ ಆಗೊದೆ. ‘ಧುರಂಧರ್ 2’ ಸಿನಿಮಾ ಜಿಯೋ ಹಾಟ್​​ಸ್ಟಾರ್ ಜೊತೆಗೆ 150 ಕೋಟಿ ರೂಪಾಯಿ ಒಪ್ಪಂದ ಮಾಡಿಕೊಂಡಿದೆ. ಅಂತರಾಷ್ಟ್ರೀಯ ಪ್ರೇಕ್ಷಕರನ್ನು ರೀಚ್ ಆಗುವ ಕಾರಣಕ್ಕೆ ನೆಟ್​​ಫ್ಲಿಕ್ಸ್​ನಲ್ಲಿಯೂ ಸಿನಿಮಾ ಬಿಡುಗಡೆ ಮಾಡಲು ಮುಂದಾಗಿದ್ದು, ನೆಟ್​​ಫ್ಲಿಕ್ಸ್​ ಜೊತೆಗೂ ದೊಡ್ಡ ಮೊತ್ತಕ್ಕೆ ಒಪ್ಪಂದ ಮಾಡಿಕೊಳ್ಳಲು ನಿರ್ಮಾಪಕರು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಾ ಇದೆ.

Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft