Health +

ಸೌತೆಕಾಯಿ ತಿನ್ನುವ ಮೊದಲು ನಿಮಗೆ ಈ ಆರೋಗ್ಯ ಸಮಸ್ಯೆ ಇದೆಯೋ, ಇಲ್ಲವೋ ತಿಳಿದುಕೊಳ್ಳಿ

ಸಾಮಾನ್ಯವಾಗಿ ಸೌತೆಕಾಯಿ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಆದರೆ ಆರೋಗ್ಯ ತಜ್ಞರು ಹಲವರಿಗೆ ಸೌತೆಕಾಯಿ ವಿಷಕ್ಕೆ ಸಮಾನ ಎನ್ನುತ್ತಾರೆ. ಹೌದು, ವಿಟಮಿನ್ ಕೆ, ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್‌ನಂತಹ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿದ್ದರೂ ಕೂಡ ಇದು ಕೆಲವರಿಗೆ ಒಳ್ಳೆಯದಲ್ಲ. ಇದು ಆಶ್ಚರ್ಯ ಉಂಟು ಮಾಡಿದರು ಸತ್ಯ. ಹಾಗಾದರೆ ಇದು ಯಾರಿಗೆ ಒಳ್ಳೆಯದಲ್ಲ, ಯಾಕೆ ಇವುಗಳನ್ನು ಸೇವನೆ ಮಾಡಬಾರದು? ಇದರಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸೌತೆಕಾಯಿ (Cucumber) ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ಹೆಚ್ಚಾಗಿ ಸಲಾಡ್, ರೈತಾ ಅಥವಾ ಜ್ಯೂಸ್ ರೂಪದಲ್ಲಿ ಸೇವನೆ ಮಾಡಲಾಗುತ್ತದೆ. ಇದರಲ್ಲಿ ಸುಮಾರು 95 ಪ್ರತಿಶತ ನೀರು ಇರುವುದರಿಂದ, ಇದು ದೇಹಕ್ಕೆ ಜಲಸಂಚಯನವನ್ನು ಒದಗಿಸುತ್ತದೆ. ಸೌತೆಕಾಯಿಗಳು ತೂಕ ಇಳಿಸಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಅದ್ಭುತವಾಗಿ ಕೆಲಸ ಮಾಡುತ್ತವೆ. ಇದಲ್ಲದೆ, ಇದು ವಿಟಮಿನ್ ಕೆ, ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್‌ನಂತಹ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಆದರೆ ಇಷ್ಟೆಲ್ಲಾ ಪ್ರಯೋಜನಗಳಿದ್ದರೂ ಕೂಡ ಕೆಲವು ಆರೋಗ್ಯ ಸಮಸ್ಯೆಗಳಿರುವವರಿಗೆ ಒಳ್ಳೆಯದಲ್ಲ. ಇದು ಆರೋಗ್ಯವನ್ನು ಮತ್ತಷ್ಟು ಹದಗೆಡಿಸಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಇದು ಯಾರಿಗೆ ಒಳ್ಳೆಯದಲ್ಲ ಎಂಬುದನ್ನು ತಿಳಿದುಕೊಳ್ಳಿ.

ಜೀರ್ಣಕಾರಿ ಸಮಸ್ಯೆ ಇರುವವರಿಗೆ ಒಳ್ಳೆಯದಲ್ಲ;

ಆಯುರ್ವೇದದ ಪ್ರಕಾರ, ಸೌತೆಕಾಯಿ ತಿನ್ನುವುದರಿಂದ ಶೀತ ಸಂಬಂಧಿ ಸಮಸ್ಯೆಗಳು ಹೆಚ್ಚಾಗುತ್ತದೆ. ಹಾಗಾಗಿ ಅಸ್ತಮಾ, ಶೀತ, ಕೆಮ್ಮು, ಕಫ, ಸೈನಸ್ ಅಥವಾ ಊತ ಸಮಸ್ಯೆ ಇರುವವರು ಸೌತೆಕಾಯಿ ಸೇವನೆ ಮಾಡುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು. ಅಲ್ಲದೆ, ಅತಿಯಾಗಿ ಸೌತೆಕಾಯಿ ಸೇವಿಸುವುದರಿಂದ ವಾತ ಹೆಚ್ಚಾಗುತ್ತದೆ. ಈಗಾಗಲೇ ಕೀಲು ನೋವು ಅಥವಾ ದೇಹದ ಉರಿಯೂತದಿಂದ ಬಳಲುತ್ತಿರುವವರು ಸೌತೆಕಾಯಿಯಿಂದ ದೂರವಿರಬೇಕು. ಶೆಂಗಾದಲ್ಲಿ ಫೈಬರ್ ಅಧಿಕವಾಗಿದ್ದರೂ, ಸೂಕ್ಷ್ಮ ಜೀರ್ಣಾಂಗ ವ್ಯವಸ್ಥೆ ಇರುವವರಿಗೆ ಇದು ಸ್ವಲ್ಪ ಅಸ್ವಸ್ಥತೆಯನ್ನು ಉಂಟುಮಾಡಬಹುದು. ಇದರಲ್ಲಿರುವ ಕುಕುರ್ಬಿಟಾಸಿನ್ ಎಂಬ ಸಂಯುಕ್ತವು ಜೀರ್ಣಕಾರಿ ಸಮಸ್ಯೆಗಳಿರುವವರಲ್ಲಿ ಅನಿಲ, ಉಬ್ಬುವುದು ಅಥವಾ ಅಜೀರ್ಣದಂತಹ ಲಕ್ಷಣಗಳನ್ನು ಉಂಟುಮಾಡಬಹುದು.

ಸೌತೆಕಾಯಿಯಲ್ಲಿ ನೀರಿನ ಅಂಶ ಹೆಚ್ಚಿರುವುದರಿಂದ, ಮೂತ್ರ ವಿಸರ್ಜನೆಯ ಸಮಸ್ಯೆಯಿಂದ ಬಳಲುತ್ತಿರುವರು ಈ ತರಕಾರಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೇ ಮಾಡುವುದರಿಂದ ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕಾಗಿ ಬರಬಹುದು ಅಥವಾ ಕೆಲವರಲ್ಲಿ ಅಸ್ವಸ್ಥತೆ ಕಂಡುಬರಬಹುದು. ಸೌತೆಕಾಯಿಗಳನ್ನು ಸಾಮಾನ್ಯವಾಗಿ ಮಧುಮೇಹ ಇರುವವರಿಗೆ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಆದರೆ ಸೌತೆಕಾಯಿ ಬೀಜಗಳನ್ನು ಇನ್ಸುಲಿನ್ ಅಥವಾ ಗ್ಲೂಕೋಸ್- ಕಡಿಮೆಗೊಳಿಸುವ ಔಷಧಿಗಳ ಸೇವನೆ ಮಾಡುವವರಿಗೆ ಸಮಸ್ಯೆ ಉಂಟುಮಾಡಬಹುದು. ಸೌತೆಕಾಯಿ ಬೀಜಗಳ ಅತಿಯಾದ ಸೇವನೆ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಹಠಾತ್ ಕುಸಿತಕ್ಕೂ ಕಾರಣವಾಗಬಹುದು ಇದು ತಲೆತಿರುಗುವಿಕೆ ಮುಂತಾದ ಲಕ್ಷಣಗಳನ್ನು ಉಂಟುಮಾಡುತ್ತದೆ. ಹಾಗಾಗಿ ಆರೋಗ್ಯ ತಜ್ಞರು ಸಾಮಾನ್ಯವಾಗಿ ಊಟದ ನಂತರ ಸೌತೆಕಾಯಿಗಳನ್ನು ಸೇವನೆ ಮಾಡದಂತೆ ಸಲಹೆ ನೀಡುತ್ತಾರೆ, ಏಕೆಂದರೆ ಅವು ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ. ಅಷ್ಟೇ ಅಲ್ಲ, ನಿದ್ರೆಗೂ ಭಂಗ ತರಬಹುದು.

Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft