Business

ಈ ಪೋಸ್ಟ್ ಆಫೀಸ್ ಸ್ಕೀಮ್​ನಲ್ಲಿ ತಿಂಗಳಿಗೆ 10,000 ರೂ ಹೂಡಿಕೆಯಿಂದ 7 ಲಕ್ಷ ರೂ ರಿಟರ್ನ್

Post Office Recurring Deposit scheme: ಅಂಚೆ ಕಚೇರಿಯಲ್ಲಿರುವ ಹಲವು ಸಣ್ಣ ಉಳಿತಾಯ ಯೋಜನೆಗಳಲ್ಲಿ ರಿಕರಿಂಗ್ ಡೆಪಾಸಿಟ್ ಅಕೌಂಟ್ ಪ್ಲಾನ್ ಒಂದು. ಐದು ವರ್ಷದವರೆಗೆ ಮಾಸಿಕವಾಗಿ ಹಣ ಕಟ್ಟುತ್ತಾ ಹೋಗಬೇಕು. ಇದರ ಹಣ ಪ್ರತೀ ಕ್ವಾರ್ಟರ್​ಗೆ ಕಾಂಪೌಂಡಿಂಗ್ ಆಗುತ್ತದೆ. ಈ ಸ್ಕೀಮ್​ಗೆ ಸದ್ಯ ಶೇ. 6.7 ಬಡ್ಡಿ ನಿಗದಿ ಮಾಡಲಾಗಿದೆ. ಕನಿಷ್ಠ ಮಾಸಿಕ ಹೂಡಿಕೆ 100 ರೂ ಇದೆ. ಗರಿಷ್ಠ ಹೂಡಿಕೆಗೆ ಮಿತಿ ಇಲ್ಲ.

ಮ್ಯೂಚುವಲ್ ಫಂಡ್ ಎಸ್​ಐಪಿ, ಬ್ಯಾಂಕ್ ಆರ್​ಡಿ ರೀತಿ ಪೋಸ್ಟ್ ಆಫೀಸ್ ರೆಕರಿಂಗ್ ಡೆಪಾಸಿಟ್ ಸ್ಕೀಮ್ (Post Office Recurring Deposit scheme) ಕೂಡ ಮಾಸಿಕವಾಗಿ ಹೂಡಿಕೆ ಮಾಡಲು ಅವಕಾಶ ನೀಡುತ್ತದೆ. ರಾಷ್ಟ್ರೀಯ ಉಳಿತಾಯ ಆವರ್ತನ ಠೇವಣಿ ಖಾತೆ ಎಂದು ಅಧಿಕೃತವಾಗಿ ಕರೆಯಲಾಗುವ ಈ ಯೋಜನೆಯು ಕೇಂದ್ರ ಹಣಕಾಸು ಸಚಿವಾಲಯದ ಬೆಂಬಲ ಹೊಂದಿದೆ. ಇಲ್ಲಿ ಹೂಡಿಕೆ ಮಾಡುವ ಹಣಕ್ಕೆ ಸರ್ಕಾರದಿಂದ ಖಾತ್ರಿ ಇರುತ್ತದೆ.

ಅಂಚೆ ಕಚೇರಿಯ ಈ ಆರ್​ಡಿ ಪ್ಲಾನ್ 5 ವರ್ಷದ ಅವಧಿಯದ್ದಾಗಿದ್ದು ಶೇ. 6.7ರಷ್ಟು ಬಡ್ಡಿ ಕೊಡುತ್ತದೆ. ಇದರಲ್ಲಿ ಕನಿಷ್ಠ ಹೂಡಿಕೆ 100 ರೂ ಇದ್ದು, ಗರಿಷ್ಠಕ್ಕೆ ಮಿತಿ ಇಲ್ಲ. 5 ವರ್ಷದವರೆಗೂ ಅವಧಿ ಇರುತ್ತದಾದರೂ ಅದಾದ ಮೇಲೆ ಇನ್ನೂ 5 ವರ್ಷ ವಿಸ್ತರಿಸಬಹುದು.

ಪೋಸ್ಟ್ ಆಫೀಸ್ ಆರ್​ಡಿಯಲ್ಲಿ ತಿಂಗಳಿಗೆ 10,000 ರೂ ಹೂಡಿಕೆ ಮಾಡಿದರೆ?

ಪೋಸ್ಟ್ ಆಫೀಸ್ ರೆಕರಿಂಗ್ ಡೆಪಾಸಿಟ್ ಸ್ಕೀಮ್​ನಲ್ಲಿ ನೀವು ತಿಂಗಳಿಗೆ 10,000 ರೂನಂತೆ 5 ವರ್ಷದವರೆಗೆ ಹೂಡಿಕೆ ಮಾಡುತ್ತಾ ಹೋದರೆ ಸುಮಾರು 7.11 ಲಕ್ಷ ರೂ ರಿಟರ್ನ್ ಸಿಗುವ ನಿರೀಕ್ಷೆ ಇದೆ.

ಇಲ್ಲಿ ಪ್ರತೀ ಕ್ವಾರ್ಟರ್​ಗೆ ಚಕ್ರಬಡ್ಡಿ ಸೇರುತ್ತಾ ಹೋಗುತ್ತದೆ. ಅಂದರೆ, ಮೂರು ತಿಂಗಳಿಗೆ ಹಣ ಕಾಂಪೌಂಡಿಂಗ್ ಆಗುತ್ತಿರುತ್ತದೆ. ಐದು ವರ್ಷದಲ್ಲಿ ನಿಮ್ಮ ಹೂಡಿಕೆಯ 6 ಲಕ್ಷ ರೂ ಹಣಕ್ಕೆ ಒಂದು ಲಕ್ಷ ರೂಗೂ ಅಧಿಕ ಬಡ್ಡಿ ಹಣ ಜಮೆಯಾದಂತಾಗುತ್ತದೆ.

ಐದು ವರ್ಷದಲ್ಲಿ 10 ಲಕ್ಷ ರೂ ಗಳಿಸಲು ಎಷ್ಟು ಹೂಡಿಕೆ ಬೇಕು?

ನೀವು ಮಾಸಿಕ ಹೂಡಿಕೆಯಿಂದ ಐದು ವರ್ಷದಲ್ಲಿ 10 ಲಕ್ಷ ರೂ ರಿಟರ್ನ್ ಪಡೆಯುವ ಗುರಿ ಹೊಂದಿದ್ದರೆ ಪೋಸ್ಟ್ ಆಫೀಸ್ ಆರ್​ಡಿ ಯೋಜನೆಯಲ್ಲಿ ತಿಂಗಳಿಗೆ ಸುಮಾರು 14,500 ರೂ ಹೂಡಿಕೆ ಮಾಡಬೇಕಾಗಬಹುದು.

ಪೋಸ್ಟ್ ಆಫೀಸ್ ಸ್ಕೀಮ್​ಗಳ ಪ್ರಮುಖ ತೊಡಕು ಎಂದರೆ ಇಲ್ಲಿ ಬ್ಯಾಂಕ್ ಆರ್​ಡಿಯಲ್ಲಿರುವಂತೆ ಆನ್ಲೈನ್ ಪೇಮೆಂಟ್ ವ್ಯವಸ್ಥೆ ಇರುವುದಿಲ್ಲ. ಖುದ್ದಾಗಿ ಅಂಚೆ ಕಚೇರಿಗೆ ಹೋಗಿ ಹಣ ಪಾವತಿಸಬೇಕಾಗುತ್ತದೆ.

Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft