
ಬೆಂಗಳೂರು, ನವೆಂಬರ್ 13: ಬೆಂಗಳೂರಿನ ದೊಮ್ಮಲೂರಿನಲ್ಲಿ ನೂತನವಾಗಿ ನಿರ್ಮಿಸಲಾದ ಡ್ರೀಮ್ ಡೀಲ್ ಗ್ರೂಪ್ ಕಾರ್ಪೊರೇಟ್ ಕಛೇರಿಯನ್ನು 14-11-25 ಗುರುವಾರದಂದು, ಸಂಸ್ಥೆಯ ಎಮ್ ಡಿ ಮುಹಮ್ಮದ್ ಸುಹೈಲ್ ರವರು ಉದ್ಘಾಟಿಸಿದ್ದಾರೆ. ಈ ಸಂದರ್ಭದಲ್ಲಿ ಡ್ರೀಮ್ ಡೀಲ್ ಸಂಸ್ಥೆಯ ಡೈರೆಕ್ಟರ್‌ಗಳು ಹಾಗೂ ಹಲವು ಸಾಮಾಜಿಕ ನಾಯಕರ ಉಪಸ್ಥಿತರಿದ್ದರು.
ದೊಮ್ಮಲೂರಿನ ಖ್ಯಾತ ಐಟಿ ಕಂಪನಿಗಳ ನಡುವೆ ಡ್ರೀಮ್ ಡೀಲ್ ಗ್ರೂಪ್‌ನ ನಾಲ್ಕು ಅಂತಸ್ತಿನ ಭವ್ಯ ಕಟ್ಟಡವು ತಲೆಯೆತ್ತಿದೆ .ಡ್ರೀಮ್ ಡೀಲ್ ಆಫೀಸ್ , ಡ್ರೀಮ್ ಡೀಲ್ ಫರ್ನಿಚರ್ಸ್ & ಇಲೆಕ್ಟ್ರಾನಿಕ್ಸ್ ಶೋ ರೂಮ್ ,ಕಾನ್ಫರೆನ್ಸ್ ಹಾಲ್, ಕಾಲ್ ಸೆಂಟರ್ ಹಾಗೂ ಡ್ರೀಮ್ ಡೀಲ್ ಗ್ರೂಪ್ ಆಶ್ರಯದ ಎಲ್ಲಾ ಅಂಗಸಂಸ್ಥೆಗಳ ಕಛೇರಿಗಳು ಒಳಗೊಂಡ ಸುಸಜ್ಜಿತವಾದ ಕಟ್ಟಡವು ಡ್ರೀಮ್ ಡೀಲ್ ಸಂಸ್ಥೆಗೆ ಹೊಸ ಶಕ್ತಿ ತಂದಿದೆ.




