News

ಕರ್ನಾಟಕ : ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ವೇಳಾಪಟ್ಟಿ ಪ್ರಕಟ.

ಬೆಂಗಳೂರು: ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟವಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆ-1 ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ ನಡೆಯಲಿದ್ದು, ಎಸ್ಸೆಸ್ಸೆಲ್ಸಿ ಪರೀಕ್ಷೆ-1 ಮಾರ್ಚ್ 18 ರಿಂದ ಏಪ್ರಿಲ್ 2 ರವರೆಗೆ ನಡೆಯಲಿದೆ. ಪರೀಕ್ಷೆ-2 ರ ವೇಳಾಪಟ್ಟಿಯನ್ನು ಸಹ ಮಂಡಳಿ ಪ್ರಕಟಿಸಿದೆ.ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರುಗಳು ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರು ತಮ್ಮ ಶಾಲಾ, ಕಾಲೇಜುಗಳ ಪ್ರಕಟಣಾ ಫಲಕದಲ್ಲಿ(ನೋಟಿಸ್ ಬೋರ್ಡ್) ವೇಳಾಪಟ್ಟಿಯನ್ನು ಪ್ರಕಿಸಬೇಕು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಪರೀಕ್ಷಾ ಮಂಡಳಿ ಹೇಳಿದೆ.

ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ :

ಫೆಬ್ರವರಿ 28 – ಕನ್ನಡ ಮತ್ತು ಅರೇಬಿಕ್
ಮಾರ್ಚ್ 2 – ಭೂಗೋಳ ಶಾಸ್ತ್ರ, ಸಂಸ್ಕೃತ, ಮನಶಾಸ್ತ್ರ
ಮಾರ್ಚ್ 3 – ಇಂಗ್ಲಿಷ್
ಮಾರ್ಚ್ 4 – ತಮಿಳು, ತೆಲುಗು, ಮಲಯಾಳಂ, ಉರ್ದು, ಸಂಸ್ಕೃತ, ಫ್ರೆಂಚ್, ಮರುಭಾಷೆಗಳು.
ಮಾರ್ಚ್ 5 – ಗಣಿತ
ಮಾರ್ಚ್ 6 – ಜೀವಶಾಸ್ತ್ರ
ಮಾರ್ಚ್ 7 – ಭೌತಶಾಸ್ತ್ರ, ವ್ಯವಹಾರ ಅಧ್ಯಯನ
ಮಾರ್ಚ್ 9 – ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ರಾಜಕೀಯ ವಿಜ್ಞಾನ
ಮಾರ್ಚ್ 10 – ಅರ್ಥಶಾಸ್ತ್ರ
ಮಾರ್ಚ್ 11 – ಇತಿಹಾಸ, ತಾರ್ಕಿಕ ಶಾಸ್ತ್ರ, ಗೃಹವಿಜ್ಞಾನ
ಮಾರ್ಚ್ 12 – ಹಿಂದಿ
ಮಾರ್ಚ್ 13 – ರಾಜ್ಯಶಾಸ್ತ್ರ
ಮಾರ್ಚ್ 14 – ಲೆಕ್ಕಶಾಸ್ತ್ರ ಮತ್ತು ಗಣಿತ
ಮಾರ್ಚ್ 16 – ಸಮಾಜ ಶಾಸ್ತ್ರ, ಬೇಸಿಕ್ ವಿಜ್ಞಾನ, ಗಣಕ ವಿಜ್ಞಾನ
ಮಾರ್ಚ್ 17 – ಹಿಂದೂಸ್ತಾನಿ ಸಂಗೀತ, ಮ್ಯೂಸಿಕ್, ಪೇಂಟಿಂಗ್, ಹೆಲ್ತ್ ಸೈನ್ಸ್, ರಿಟೇಲ್, ಆಫೀಸ್ ಮ್ಯಾನೇಜ್‌ಮೆಂಟ್, ಹೆಲ್ತ್ ಕೇರ್, ಬ್ಯೂಟಿ ಮತ್ತು ವೆಲ್ನೆಸ್.

ಸಮಯ: ಬೆಳಿಗ್ಗೆ 10.15 ರಿಂದ ಮಧ್ಯಾಹ್ನ 1.30ರವರೆಗೆ
(ಕೆಲವು ವಿಷಯಗಳಿಗೆ ಸಮಯ ಬದಲಾಗಬಹುದು)

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ :

ಮಾರ್ಚ್ 18 – ಪ್ರಥಮ ಭಾಷೆ: ಕನ್ನಡ, ತೆಲುಗು, ಹಿಂದಿ, ಮಲಯಾಳಂ, ಉರ್ದು, ಇಂಗ್ಲಿಷ್ (ಎನ್‌ಸಿಐಆರ್‌ಟಿ)
ಮಾರ್ಚ್ 23 – ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ, ಕರ್ನಾಟಕ ಸಂಗೀತ
ಮಾರ್ಚ್ 25 – ದ್ವಿತೀಯ ಭಾಷೆ: ಇಂಗ್ಲಿಷ್ ಮತ್ತು ಕನ್ನಡ
ಮಾರ್ಚ್ 28 – ಗಣಿತ ಮತ್ತು ಸಮಾಜಶಾಸ್ತ್ರ
ಮಾರ್ಚ್ 30 – ತೃತೀಯ ಭಾಷೆಗಳು: ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಎನ್‌ಎಸ್‌ಕ್ಯುಎಫ್
ಏಪ್ರಿಲ್ 1 – ಅರ್ಥಶಾಸ್ತ್ರ, ಎಂಜಿನಿಯರಿಂಗ್
ಏಪ್ರಿಲ್ 2 – ಸಮಾಜ ವಿಜ್ಞಾನ ಕ್ರಮವಾಗಿ ನಡೆಯಲಿದೆ ಎಂದು ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft