News

ಡಿಸೆಂಬರ್ 31 ಕ್ಕೆ ಕೊನೆಯ ಗಡುವು ನೀಡಿದ ಸಿಬಿಡಿಟಿ..! ಆಧಾ‌ರ್‌ಗೆ ಲಿಂಕ್ ಮಾಡದ ಪ್ಯಾನ್ ಕಾರ್ಡ್‌ಗಳು ಜನವರಿ ಒಂದರಿಂದ ನಿಷ್ಕ್ರಿಯ.

ನವದೆಹಲಿ : 2025ರ ಡಿಸೆಂಬರ್ 31ರೊಳಗೆ ಆಧಾರ್ಗೆ ಲಿಂಕ್ ಆಗದಿರುವ ಪ್ಯಾನ್ ನಂಬರ್ಗಳು ನಿಷ್ಕ್ರಿಯಗೊಳ್ಳಲಿವೆ ಎಂದು ಸಿಬಿಡಿಟಿ ಹೇಳಿದೆ. ನಿಷ್ಕ್ರಿಯಗೊಂಡ ಪ್ಯಾನ್ ಇದ್ದೂ ಇಲ್ಲದಂತಾಗುತ್ತದೆ. ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆ ಅಸಾಧ್ಯವಾಗುತ್ತದೆ. ನಿಷ್ಕ್ರಿಯಗೊಂಡ ಪ್ಯಾನ್ ಇದ್ದೂ ಇಲ್ಲದಂತಾಗುತ್ತದೆ. ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆ ಅಸಾಧ್ಯವಾಗುತ್ತದೆ.

ಆಧಾರ್ ಜೊತೆ ಪ್ಯಾನ್ ಲಿಂಕ್ ಮಾಡಬೇಕು ಎಂದು ಆದಾಯ ತೆರಿಗೆ ಇಲಾಖೆ ಹೇಳುತ್ತಲೇ ಬಂದಿದೆ. ಇದೀಗ ಡಿಸೆಂಬರ್ 31ಕ್ಕೆ ಡೆಡ್ಲೈನ್ ಕೊಟ್ಟಿದೆ. ಹೀಗೆ ಆಧಾರ್ಗೆ ಲಿಂಕ್ ಆಗದ ಪ್ಯಾನ್ ಕಾರ್ಡ್ಗಳು ಮುಂದಿನ ವರ್ಷದಿಂದ ನಿಷ್ಕ್ರಿಯಗೊಳ್ಳಲಿವೆ. ಅಂದರೆ, 2026ರ ಜನವರಿ 1ರಿಂದ ಇಂಥ ಪ್ಯಾನ್ ಸಂಖ್ಯೆ ಇನಾಪರೇಟಿವ್ ಆಗಲಿವೆ. ಪ್ಯಾನ್ ಇಲ್ಲದಿದ್ದರೆ ಬಹಳಷ್ಟು ಹಣಕಾಸು ಸೇವೆಗಳನ್ನು ಪಡೆಯಲು ಸಾಧ್ಯವಾಗದೇ ಹೋಗಬಹುದು.2025ರ ಅಕ್ಟೋಬರ್ 1ಕ್ಕೆ ಮುನ್ನ ಪ್ಯಾನ್ ಕಾರ್ಡ್ಗಳನ್ನು ಪಡೆದವರು ಆಧಾರ್ಗೆ ಅದನ್ನು ಲಿಂಕ್ ಮಾಡಲು 2025ರ ಡಿಸೆಂಬರ್ 31ರವರೆಗೂ ಕಾಲಾವಕಾಶ ಕೊಡಲಾಗಿದೆ.

ಅಷ್ಟರಲ್ಲಿ ಲಿಂಕ್ ಮಾಡದೇ ಹೋದರೆ ಪ್ಯಾನ್ ಅನ್ನು ಅನೂರ್ಜಿತಗೊಳಿಸಲಾಗುತ್ತದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಹೇಳಿದೆ.ಪ್ಯಾನ್ ಅಥವಾ ಪರ್ಮನೆಂಟ್ ಅಕೌಂಟ್ ನಂಬರ್ ಎಂಬುದು ಪ್ರತೀ ವ್ಯಕ್ತಿಗೂ ಆದಾಯ ತೆರಿಗೆ ಇಲಾಖೆ ನೀಡುವ ಗುರುತಿನ ಸಂಖ್ಯೆಯಾಗಿದೆ.

ತೆರಿಗೆ ಉದ್ದೇಶದಿಂದ ಇದನ್ನು ನೀಡಲಾಗುತ್ತದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು, ದೊಡ್ಡ ಮೊತ್ತದ ಕ್ಯಾಷ್ ಡೆಪಾಸಿಟ್ವರೆಗೆ ಅನೇಕ ಹಣಕಾಸು ಕಾರ್ಯಗಳಿಗೆ ಪ್ಯಾನ್ ಕಡ್ಡಾಯವಾಗಿರುತ್ತದೆ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft