
ಹೊಸದಿಲ್ಲಿ : “ಮತಗಳ್ಳತನ ಈಗ ಸ್ಥಳೀಯ ಮಟ್ಟಕ್ಕೆ ಸೀಮಿತವಾಗದೆ ರಾಷ್ಟ್ರಮಟ್ಟದಲ್ಲಿ
ನಡೆಯುತ್ತಿರುವ ಯೋಜಿತ ಷಡ್ಯಂತ್ರವಾಗಿದೆ” ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರು ಆರೋಪಿಸಿದ್ದಾರೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿಯೂ ಮತಗಳ್ಳತನ, ಮತದಾರರ ಪಟ್ಟಿಯಲ್ಲಿ ತಿದ್ದುಪಡಿ,ಹಾಗೂ ಇವಿಎಂ ದುರುಪಯೋಗದಂತಹ ಘಟನೆಗಳು ನಡೆದಿರುವುದು
ಬಹಿರಂಗ ಪಡಿಸಿದ್ದಾರೆ
“ಅಳಂದ, ಮಹದೇವಪುರದಲ್ಲಿ ಈ ಮಾದರಿಯ ವಂಚನೆ ಕಂಡಿದ್ದವು. ಇದೀಗ ಹರ್ಯಾಣದಲ್ಲೂ ಅದೇ ರೀತಿಯ ಮತಗಳ್ಳತನ ನಡೆದಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನೇರ ದಾಳಿ,” ಎಂದು ರಾಹುಲ್ ಗಾಂಧಿ ಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇವರು ಈ ವಿಷಯದಲ್ಲಿ ಬಂದ ನೇರಪ್ರಸಾರವನ್ನು ಸಾವಿರಾರು ಜನ ವೀಕ್ಷಿಸುವ ಮೂಲಕ ದೇಶದಲ್ಲೆಡೆ
ಮತ್ತೆ ಮತಗಳ್ಳತನದ ಬಗ್ಗೆ ಚರ್ಚಿಸುವಂತಾಗಿದೆ.




