ಭಾರತದಲ್ಲಿ ಭೂಮಿಯಿಂದ ಜಿಟಿಒಗೆ ಉಡಾಯಿಸಲಾದ ಅತ್ಯಂತ ಭಾರವಾದ ಉಪಗ್ರಹ ಇದಾಗಿದೆ. ಸ್ವದೇಶಿ ನಿರ್ಮಿತ ರಾಕೆಟ್ ಬಳಸಿ ಉಡಾಯಿಸಲಾದ ಇಸ್ರೋದ ಅತ್ಯಂತ ಭಾರವಾದ ಉಪಗ್ರಹ ಬಾಹುಬಲಿಯಾಗಿದೆ.

ಶ್ರೀಹರಿಕೋಟಾ, ಆಂಧ್ರ ಪ್ರದೇಶ: ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಒಂದು ಮೈಲಿಗಲ್ಲಾಗಿ, ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಕೇಂದ್ರ (ಇಸ್ರೋ – ISRO) (Indian Space Research Organisation) ಭಾನುವಾರ ಸಂಜೆ 5:26 ಕ್ಕೆ ‘ಬಾಹುಬಲಿ’ಯನ್ನು (Baahubali) ಯಶಸ್ವಿಯಾಗಿ ನಭಕ್ಕೆ ಹಾರಿಸಿದೆ. ಭಾರತೀಯ ರಾಕೆಟ್‌ನಲ್ಲೇ (Indian rocket) ಅತ್ಯಂತ ಭಾರವಾದ ಉಪಗ್ರಹ (heaviest satellite) ಬಾಹುಬಲಿಯನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿತು.
ಏನಿದು ‘ಬಾಹುಬಲಿ’ ಉಪಗ್ರಹ?
ಇಸ್ರೋ ತನ್ನ 4,410 ಕೆಜಿ ತೂಕದ CMS-03 ಸಂವಹನ ಉಪಗ್ರಹವನ್ನು 43.5 ಮೀಟರ್ ಎತ್ತರದ LVM3-M5 ರಾಕೆಟ್‌ನಲ್ಲಿ ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್ (GTO) ಗೆ ಉಡಾವಣೆ ಮಾಡಿತು, ಇದನ್ನು ಅದರ ಭಾರ ಎತ್ತುವ ಸಾಮರ್ಥ್ಯಕ್ಕಾಗಿ ‘ಬಾಹುಬಲಿ’ ಎಂದು ಕರೆಯಲಾಗುತ್ತದೆ.
ಭಾರತದ ಅತ್ಯಂತ ಭಾರವಾದ ಉಪಗ್ರಹ
ಭಾರತದಲ್ಲಿ ಭೂಮಿಯಿಂದ ಜಿಟಿಒಗೆ ಉಡಾಯಿಸಲಾದ ಅತ್ಯಂತ ಭಾರವಾದ ಉಪಗ್ರಹ ಇದಾಗಿದೆ. ಸ್ವದೇಶಿ ನಿರ್ಮಿತ ರಾಕೆಟ್ ಬಳಸಿ ಉಡಾಯಿಸಲಾದ ಇಸ್ರೋದ ಅತ್ಯಂತ ಭಾರವಾದ ಉಪಗ್ರಹ ಬಾಹುಬಲಿಯಾಗಿದೆ.