News

ಬೆಂಗಳೂರಿನ ಫೈನಾನ್ಸ್‌ ಕಂಪನಿಯ ಸಾಫ್ಟ್‌ವೇರ್‌ ಹ್ಯಾಕ್‌, 2 ಗಂಟೆಯಲ್ಲಿ ಬರೋಬ್ಬರಿ ₹47 ಕೋಟಿ ಲೂಟಿ!

ಬೆಂಗಳೂರು: ಎರಡೂವರೆ ಗಂಟೆ ಅವಧಿಯಲ್ಲಿ ಫೈನಾನ್ಸ್‌ ಕಂಪನಿಯೊಂದರ ತಂತ್ರಾಂಶ ಹ್ಯಾಕ್‌ ಮಾಡಿ 47 ಕೋಟಿ ರೂ. ದೋಚಿದ್ದ ಅಂತಾರಾಷ್ಟ್ರೀಯ ಜಾಲದ ಹ್ಯಾಕರ್‌ಗಳ ಕಾರ್ಯತಂತ್ರವನ್ನು ಪೊಲೀಸರು ಬಯಲು ಮಾಡಿದ್ದಾರೆ.

ವಿಸ್ಡಮ್‌’ ಕಂಪನಿಯ ಎಪಿಐ ಕೀ ಪಡೆದಿದ್ದ ಹ್ಯಾಕರ್‌ಗಳು, ಆಗಸ್ಟ್‌ 7ರಂದು ತಡರಾತ್ರಿ ವಿಸ್ಡಮ್‌ ಕಂಪನಿ ಹಾಗೂ ಅದಕ್ಕೆ ಸಂಬಂಧಿಸಿದ ಹಣಕಾಸು ವರ್ಗಾವಣೆ ಮಾಡುವ ಮನಿ ವ್ಯೂ ಆ್ಯಪ್‌ ಹ್ಯಾಕ್‌ ಮಾಡಿದ್ದರು. ಕೇವಲ ಎರಡೂವರೆಯಿಂದ ಮೂರು ಗಂಟೆ ಅವಧಿಯಲ್ಲಿ ಕಂಪನಿಯಲ್ಲಿದ್ದ 47 ಕೋಟಿ ರೂ.ಗಳನ್ನು 656 ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದರು. ಪ್ರತಿ ಖಾತೆಗೆ ಐದರಿಂದ ಹತ್ತು ಲಕ್ಷ ರೂ. ವರ್ಗಾವಣೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ದುಬೈನಲ್ಲಿ ಸೂತ್ರಧಾರರು


ವಂಚನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಇಬ್ಬರು ದುಬೈನಲ್ಲಿರುವ ಮಾಹಿತಿ ಸಿಕ್ಕಿದೆ. ಇಸ್ಮಾಯಿಲ್‌ಗೆ ದುಬೈನ ವ್ಯಕ್ತಿಗಳ ನಂಟಿದ್ದು, ಅವರ ಸೂಚನೆ ಮೇರೆಗೆ ಕೆಲವು ಕಂಪನಿಗಳ ಸರ್ವರ್‌ ಖರೀದಿಸಿ ಪುನಃ ಅವರಿಗೆ ಗೌಪ್ಯ ಮಾಹಿತಿ ನೀಡುತ್ತಿದ್ದ. ಈ ಮಾಹಿತಿ ಹಾಂಕಾಂಗ್‌ನ ಹ್ಯಾಕರ್‌ಗಳ ಕೈ ಸೇರುತ್ತಿತ್ತು. ಹ್ಯಾಕರ್‌ಗಳು ಕಂಪನಿಯ ಖಾತೆಯಿಂದ ದೋಚಿದ್ದ ಹಣವನ್ನು ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿನ 656 ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸುತ್ತಿದ್ದರು.

ದುಬೈನಲ್ಲಿರುವ ಸೂತ್ರಧಾರರು ಅಲ್ಲಿಕೆಲಸ ಮಾಡುವ ಭಾರತೀಯ ಪ್ರಜೆಗಳನ್ನು ಪರಿಚಯ ಮಾಡಿಕೊಂಡು ಅವರ ಸಂಬಂಧಿಕರ ಬ್ಯಾಂಕ್‌ ಖಾತೆ ವಿವರ ಪಡೆಯುತ್ತಿದ್ದರು. ಸಂಬಂಧಿಕರಿಗೆ ಕಳಿಸಬೇಕಾದ ಮೊತ್ತವನ್ನು ನಾವು ಕೊಡುತ್ತೇವೆ ಎಂದು ಅವರಿಂದ ಖಾತೆ ವಿವರ ಪಡೆಯುತ್ತಿದ್ದ ವಂಚಕರು, ವಿಸ್ಡಮ್‌ ಕಂಪನಿಯಿಂದ ದೋಚಿದ ಹಣವನ್ನು ಅವರ ಖಾತೆಗಳಿಗೆ ವರ್ಗಾಯಿಸುತ್ತಿದ್ದರು. ಈ ಮುಖಾಂತರ ಬಾಡಿಗೆ ಖಾತೆಗಳು ವಂಚನೆಗೆ ಬಳಕೆಯಾಗುತ್ತಿದ್ದವು.
Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft