News

ಟಿಕೆಟ್‌ ಕೇಳಿದ ಮಹಿಳೆಯರಿಗೆ ಸ್ವತಃ ಟಿಕೆಟ್‌ ವಿತರಿಸಿ ಯೋಜನೆಗೆ ಚಾಲನೆ ನೀಡಿದ ಸಿಎಂ ವಿಜಯ್‌; ಉಚಿತ ಬಸ್‌ ಪ್ರಯಾಣದ ಸೌಲಭ್ಯ ಮತ್ತಷ್ಟು ವಿಸ್ತರಣೆ!

ಚೆನ್ನೈ, 03-10-2026 : ತಮಿಳುನಾಡಿನಲ್ಲಿ ಮಹಿಳೆಯರು ಮತ್ತು ತೃತೀಯಲಿಂಗಿಗಳಿಗೆ ಉಚಿತ ಬಸ್‌ ಪ್ರಯಾಣದ ಸೌಲಭ್ಯವನ್ನು ಮತ್ತಷ್ಟು ವಿಸ್ತರಿಸಲಾಗಿದ್ದು, ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್‌ ಅವರು ಅಕ್ಟೋಬರ್‌ 2ರಂದು ‘ವೆಟ್ರಿ ಪಯಣಂ ತಿಟ್ಟಂ’ ಯೋಜನೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸ್ವತಃ ಬಸ್‌ ಕಂಡಕ್ಟರ್‌ ಪಾತ್ರ ನಿರ್ವಹಿಸಿದ ವಿಜಯ್‌, ಮಹಿಳಾ ಪ್ರಯಾಣಿಕರಿಗೆ ಉಚಿತ ಟಿಕೆಟ್‌ಗಳನ್ನು ವಿತರಿಸಿ ಗಮನ ಸೆಳೆದರು.

ಮಹಾತ್ಮ ಗಾಂಧಿ ಜಯಂತಿಯಂದು ಚೆನ್ನೈನ ಕೋಯಂಬೇಡು ಬಸ್‌ ನಿಲ್ದಾಣದಿಂದ ಕಾಂಚೀಪುರಂ ಕಡೆಗೆ ತೆರಳುತ್ತಿದ್ದ ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸಿದ ಅವರು, ಪ್ರಯಾಣಿಕರೊಂದಿಗೆ ಸಂವಾದ ನಡೆಸಿದರು. ಈ ಹಿಂದೆ ಸಾಮಾನ್ಯ ನಗರ ಬಸ್‌ಗಳಿಗೆ ಸೀಮಿತವಾಗಿದ್ದ ಉಚಿತ ಪ್ರಯಾಣದ ಸೌಲಭ್ಯವನ್ನು ಇದೀಗ ಎಕ್ಸ್‌ಪ್ರೆಸ್‌, ಲಿಮಿಟೆಡ್‌ ಸ್ಟಾಪ್‌ ಸರ್ವಿಸ್‌, ಡಿಲಕ್ಸ್‌ ಹಾಗೂ ಇತರ ಆಯ್ದ ಸರ್ಕಾರಿ ಬಸ್‌ ಸೇವೆಗಳಿಗೂ ವಿಸ್ತರಿಸಲಾಗಿದೆ.

ಹೊಸ ಯೋಜನೆಯಡಿ ರಾಜ್ಯದ ಏಳು ಸಾರಿಗೆ ನಿಗಮಗಳ ಒಟ್ಟು 12,695 ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸಲಾಗಿದೆ. ಪ್ರತಿದಿನ ಸುಮಾರು 84.32 ಲಕ್ಷ ಮಹಿಳೆಯರು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದು ಸರ್ಕಾರ ಅಂದಾಜಿಸಿದೆ. ಆದಾಯದ ಮಿತಿ ಅಥವಾ ದಿನಕ್ಕೆ ಪ್ರಯಾಣಿಸುವ ಸಂಖ್ಯೆಯ ಮೇಲೆ ಯಾವುದೇ ನಿರ್ಬಂಧವಿಲ್ಲ ಎಂದು ತಿಳಿಸಲಾಗಿದೆ.

ತೃತೀಯಲಿಂಗಿಗಳಿಗೂ ಈ ಸೌಲಭ್ಯ ವಿಸ್ತರಿಸಿರುವುದು ಯೋಜನೆಯ ಪ್ರಮುಖ ಅಂಶವಾಗಿದೆ. ಮಹಿಳೆಯರು ಮತ್ತು ತೃತೀಯಲಿಂಗಿಗಳಿಗೆ ಶಿಕ್ಷಣ, ಉದ್ಯೋಗ, ಆರೋಗ್ಯ ಸೇವೆ ಹಾಗೂ ದೈನಂದಿನ ಚಟುವಟಿಕೆಗಳಿಗೆ ಸಾರಿಗೆ ವೆಚ್ಚ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಯೋಜನೆಯನ್ನು ವಿಸ್ತರಿಸಲಾಗಿದೆ. ಯೋಜನೆಯ ಅನುಷ್ಠಾನಕ್ಕೆ ವಾರ್ಷಿಕ ಸುಮಾರು 6,000 ಕೋಟಿ ರೂಪಾಯಿ ವೆಚ್ಚವಾಗಬಹುದು ಎಂದು ತಮಿಳುನಾಡು ಸರ್ಕಾರ ಅಂದಾಜಿಸಿದೆ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft