News

ಮ್ಯಾನ್ಮಾರ್‌‌ ಸೇನೆಯಿಂದಲೇ ಮ್ಯಾನ್ಮಾರ್‌ನಲ್ಲಿ ವೈಮಾನಿಕ ದಾಳಿ!ಬೌದ್ಧ ಮಠವೇ ದಾಳಿಯ ಗುರಿ; 14 ಮಂದಿ ಬಲಿ!

ಯಾಂಗಾನ್, ಆಗಸ್ಟ್ 21: ಮ್ಯಾನ್ಮಾರ್‌ನ ಸಗೈಂಗ್ ಪ್ರದೇಶದಲ್ಲಿರುವ ಬೌದ್ಧ ಮಠದ ಮೇಲೆ ಶುಕ್ರವಾರ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ 14 ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯರನ್ನು ಉಲ್ಲೇಖಿಸಿ ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಮೃತರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ.

ಮ್ಯಾಂಡಲೇ ನಗರದಿಂದ ಸುಮಾರು 75 ಕಿಲೋಮೀಟರ್ ಪಶ್ಚಿಮದಲ್ಲಿರುವ ಮ್ಯಾಂಗ್ ಟೌನ್‌ಶಿಪ್‌ನ ಸ್ವೆಲ್ ಲೇವೊ ಗ್ರಾಮದ ಬೌದ್ಧ ಮಠದ ಆವರಣಕ್ಕೆ ಯುದ್ಧ ವಿಮಾನದಿಂದ ಬಾಂಬ್ ದಾಳಿ ನಡೆಸಲಾಗಿದೆ. ದಾಳಿಯ ವೇಳೆ ವಾರದ ಧ್ಯಾನ ಶಿಬಿರದಲ್ಲಿ 100ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು ಎಂದು ವರದಿ ತಿಳಿಸಿದೆ.

ಮೊದಲ ದಾಳಿಯ ಸುಮಾರು 15 ನಿಮಿಷಗಳ ಬಳಿಕ ಮತ್ತೊಂದು ಬಾಂಬ್ ದಾಳಿ ನಡೆದಿದ್ದು, ಮಠದ ಸಮೀಪದಲ್ಲಿದ್ದ ಮನೆಯೊಂದಕ್ಕೂ ಹಾನಿಯಾಗಿದೆ. ದಾಳಿಯಲ್ಲಿ ಗಾಯಗೊಂಡ 20 ಮಂದಿಯನ್ನು ಸ್ಥಳೀಯರು ಆಸ್ಪತ್ರೆಗೆ ಹಾಗೂ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದ್ದಾರೆ. ಮೃತರ ಅಂತ್ಯಕ್ರಿಯೆಯ ಬಳಿಕ ಹಲವರು ಸ್ಥಳಾಂತರಗೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮ್ಯಾನ್ಮಾರ್‌ನಲ್ಲಿ 2021ರ ಸೇನಾ ದಂಗೆ ಬಳಿಕ ಮುಂದುವರಿದಿರುವ ಸಂಘರ್ಷದ ನಡುವೆ ವೈಮಾನಿಕ ದಾಳಿಗಳು ಹೆಚ್ಚಾಗುತ್ತಿದ್ದು, ನಾಗರಿಕರು ಬಲಿಯಾಗುತ್ತಿರುವ ಬಗ್ಗೆ ನಿರಂತರ ಆತಂಕ ವ್ಯಕ್ತವಾಗುತ್ತಿದೆ. ಈ ದಾಳಿಯ ಕುರಿತು ಮ್ಯಾನ್ಮಾರ್ ಸೇನೆ ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸೇನೆ ಹಿಂದಿನ ಹೇಳಿಕೆಗಳಲ್ಲಿ ತಾನು ಕೇವಲ ಸೇನಾ ಗುರಿಗಳನ್ನೇ ದಾಳಿ ಮಾಡುತ್ತಿರುವುದಾಗಿ ಪ್ರತಿಪಾದಿಸಿತ್ತು.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft