Business News

ಜಾಗತಿಕ ಮಾರುಕಟ್ಟೆ ಚಲನವಲನ: ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರಿ ಏರಿಕೆ

ಬೆಂಗಳೂರು, ಆಗಸ್ಟ್ 08, 2026: ಜಾಗತಿಕ ಮಾರುಕಟ್ಟೆಯಲ್ಲಿನ ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳು, ಭಾರತೀಯ ರೂಪಾಯಿಯ ಮೌಲ್ಯ ದುರ್ಬಲಗೊಳ್ಳುತ್ತಿರುವುದು ಹಾಗೂ ಅಂತರರಾಷ್ಟ್ರೀಯ ಸೂಚ್ಯಂಕಗಳ ಬೆಂಬಲದಿಂದಾಗಿ ದೇಶಾದ್ಯಂತ ಚಿನ್ನದ ದರದಲ್ಲಿ ಭಾರಿ ಏರಿಕೆ ದಾಖಲಾಗಿದೆ. ಜನವರಿ ತಿಂಗಳ ನಂತರ ಅತ್ಯಂತ ಪ್ರಬಲವಾದ ವಾರದ ಏರಿಕೆಯತ್ತ ಪ್ರಸ್ತುತ ಚಿನ್ನದ ಮಾರುಕಟ್ಟೆ ಸಾಗಿದ್ದು, ಕಳೆದ ಕೆಲವು ದಿನಗಳಿಂದ ಕಂಡುಬರುತ್ತಿದ್ದ ಸ್ಥಿರತೆಯನ್ನು ಮೀರಿ ಬೆಲೆಗಳು ಗಣನೀಯವಾಗಿ ಹೆಚ್ಚಾಗಿವೆ. ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ಸ್ಥಿರತೆಯಲ್ಲಿದ್ದ ಚಿನ್ನದ ಬೆಲೆಯು ಇದೀಗ ಆಗಸ್ಟ್ ತಿಂಗಳ ಆರಂಭದಿಂದಲೇ ಮತ್ತೆ ಹೊಸ ಗರಿಷ್ಠ ಮಟ್ಟದತ್ತ ಜಿಗಿಯುತ್ತಿರುವುದು ಗ್ರಾಹಕರು ಹಾಗೂ ಹೂಡಿಕೆದಾರರ ಗಮನ ಸೆಳೆದಿದೆ.
​ಕರ್ನಾಟಕದ ಪ್ರಮುಖ ನಗರಗಳಾದ ಬೆಂಗಳೂರು ಮತ್ತು ಮಂಗಳೂರು ಮಾರುಕಟ್ಟೆಗಳಲ್ಲಿ ಶನಿವಾರ ಬೆಳಗಿನ ವಹಿವಾಟಿನಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ 109 ರೂಪಾಯಿ ಏರಿಕೆಯಾಗಿ, ಹತ್ತು ಗ್ರಾಂ ಬೆಲೆಯು 1,52,350 ರೂಪಾಯಿಗೆ ಬಂದು ತಲುಪಿದೆ. ಅದೇ ರೀತಿ, ಆಭರಣ ಚಿನ್ನ ಎಂದೇ ಕರೆಯಲ್ಪಡುವ 22 ಕ್ಯಾರೆಟ್ ಚಿನ್ನದ ದರವು ಪ್ರತಿ ಗ್ರಾಂಗೆ 100 ರೂಪಾಯಿ ಹೆಚ್ಚಳ ಕಂಡು, ಹತ್ತು ಗ್ರಾಂಗೆ 1,39,650 ರೂಪಾಯಿಗೆ ತಲುಪಿದೆ. ಇನ್ನು 18 ಕ್ಯಾರೆಟ್ ಚಿನ್ನದ ದರವು ಪ್ರತಿ ಗ್ರಾಂಗೆ 82 ರೂಪಾಯಿ ಏರಿಕೆಯಾಗಿ ಹತ್ತು ಗ್ರಾಂಗೆ 1,14,260 ರೂಪಾಯಿಯಷ್ಟಾಗಿದೆ.
​ದೇಶದ ಇತರ ಪ್ರಮುಖ ಮಹಾನಗರಗಳಾದ ದೆಹಲಿ, ಮುಂಬೈ, ಅಹಮದಾಬಾದ್, ಕೊಲ್ಕತ್ತಾ, ಹೈದರಾಬಾದ್, ಜೈಪುರ, ಚಂಡೀಗಢ್ ಹಾಗೂ ಕೊಚ್ಚಿಗಳಲ್ಲೂ ಸಹ ಚಿನ್ನದ ಬೆಲೆಯಲ್ಲಿ ಇದೇ ರೀತಿಯ ಸತತ ಏರಿಕೆಯ ಪ್ರವೃತ್ತಿ ಕಂಡುಬಂದಿದೆ. ದೆಹಲಿ ಮತ್ತು ಜೈಪುರದಲ್ಲಿ 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ 15,255 ರೂಪಾಯಿಗೆ ತಲುಪಿದ್ದರೆ, ಮುಂಬೈ, ಕೋಲ್ಕತ್ತಾ ಮತ್ತು ಹೈದರಾಬಾದ್ ನಗರಗಳಲ್ಲಿ ಪ್ರತಿ ಗ್ರಾಂಗೆ 15,235 ರೂಪಾಯಿಯಂತೆ ವಹಿವಾಟು ನಡೆಸಿದೆ. ಕಚ್ಚಾ ತೈಲ ಬೆಲೆಗಳಲ್ಲಿನ ವ್ಯತ್ಯಾಸ ಹಾಗೂ ಅಂತರರಾಷ್ಟ್ರೀಯ ಆರ್ಥಿಕ ಸನ್ನಿವೇಶಗಳು ಈ ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿವೆ.
​ಚಿನ್ನದ ದರ ಏರಿಕೆಯ ಜೊತೆಗೆ ಬೆಳ್ಳಿಯ ಬೆಲೆಯಲ್ಲೂ ಸಹ ಏರಿಕೆಯ ಹಾದಿ ಮುಂದುವರಿದಿದೆ. ಶುಕ್ರವಾರದವರೆಗೆ ಸ್ಥಿರವಾಗಿದ್ದ ಬೆಳ್ಳಿಯ ದರವು ಶನಿವಾರ ಪ್ರತಿ ಗ್ರಾಂಗೆ 5 ರೂಪಾಯಿ ಹೆಚ್ಚಾಗುವ ಮೂಲಕ ಪ್ರತಿ ಕೆಜಿಗೆ 2,45,000 ರೂಪಾಯಿಗೆ ಬಂದು ತಲುಪಿದೆ. ಮೇ ತಿಂಗಳಿನಲ್ಲಿ ಗರಿಷ್ಠ ಮಟ್ಟ ಮುಟ್ಟಿದ್ದ ಬೆಳ್ಳಿ ದರವು ನಂತರದ ದಿನಗಳಲ್ಲಿ ಸ್ಥಿರಗೊಂಡಿತ್ತಾದರೂ, ಪ್ರಸ್ತುತ ಚಿನ್ನದ ಬೆಲೆಯೊಂದಿಗೆ ಸಾಥ್ ನೀಡುತ್ತಾ ಮತ್ತೆ ಏರಿಕೆಯ ಹಾದಿಯಲ್ಲಿದೆ

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft