GULF News

ಸ್ಕೈಡೈವಿಂಗ್‌ ವಿನೋದಕ್ಕಾಗಿ ಹೋದವರು ಮರಳಿ ಬಂದಿದ್ದು ಹೆಣವಾಗಿ!: ಫ್ರಾನ್ಸ್‌ನಲ್ಲಿ ಸ್ಕೈ ಡೈವಿಂಗ್ ವಿಮಾನ ಪತನ, 11 ಮಂದಿ ದುರ್ಮರಣ!

ಪ್ಯಾರಿಸ್, ಜೂನ್ 29, 2026: ಫ್ರಾನ್ಸ್‌ನ ನ್ಯಾನ್ಸಿ ಸಮೀಪದ ಟೊಂಬ್ಲೇನ್ ಪ್ರದೇಶದಲ್ಲಿ ಭಾನುವಾರ ಸ್ಕೈಡೈವರ್‌ಗಳ ಗುಂಪನ್ನು ಹೊತ್ತೊಯ್ಯುತ್ತಿದ್ದ ನಾಗರಿಕ ವಿಮಾನವೊಂದು ಪತನಗೊಂಡು 11 ಮಂದಿ ಸಾವನ್ನಪ್ಪಿದ್ದಾರೆ. ಫ್ರೆಂಚ್ ದಿನಪತ್ರಿಕೆ ‘ಲೆ ಪ್ಯಾರಿಸಿಯನ್’ ವರದಿಗಳ ಪ್ರಕಾರ, ಮೃತರಲ್ಲಿ ಐವರು ಅನುಭವಿ ತರಬೇತುದಾರರು, ಐವರು ವಿದ್ಯಾರ್ಥಿಗಳು ಹಾಗೂ ಒಬ್ಬ ಪೈಲಟ್ ಸೇರಿದ್ದಾರೆ ಎಂದು ಶಂಕಿಸಲಾಗಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಮತ್ತು ತನಿಖಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.

​ಈ ಭೀಕರ ಅಪಘಾತದಲ್ಲಿ ಜೀವ ಕಳೆದುಕೊಂಡವರೆಲ್ಲರೂ ನ್ಯಾನ್ಸಿ ಪ್ರದೇಶದ ಖಾಸಗಿ ಸೇವೆ ಸಲ್ಲಿಸುತ್ತಿದ್ದ ದಾದಿಯರಾಗಿದ್ದರು ಎಂದು ತಿಳಿದುಬಂದಿದೆ. ಮೆರ್ಥ್-ಎಟ್-ಮೊಸೆಲ್ಲೆ ಸ್ವತಂತ್ರ ದಾದಿಯರ ಸಂಘದ ಅಧ್ಯಕ್ಷ ಥಿಯೆರ್ರಿ ಪೆಚೆ ಈ ಕುರಿತು ಮಾಹಿತಿ ನೀಡಿ, ಮೃತರು ಮೊದಲ ಬಾರಿಗೆ ಸ್ಕೈಡೈವಿಂಗ್ ರೋಮಾಂಚಕ ಅನುಭವವನ್ನು ಪಡೆಯಲು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಮೃತಪಟ್ಟವರೆಲ್ಲರೂ ಪರಸ್ಪರ ಪರಿಚಿತರಾಗಿದ್ದ ಖಾಸಗಿ ದಾದಿಯರಾಗಿದ್ದು, ಇವರ ಸಾವು ಆರೋಗ್ಯ ವಲಯದಲ್ಲಿ ತೀವ್ರ ಶೋಕವನ್ನು ಉಂಟುಮಾಡಿದೆ.

​ದುರಂತದ ಸಂದರ್ಭದಲ್ಲಿ ಪರಿಚಯಾತ್ಮಕ ಸ್ಕೈಡೈವಿಂಗ್ ಕಾರ್ಯಕ್ರಮವನ್ನು ವೀಕ್ಷಿಸಲು ಬಂದಿದ್ದ ಹಲವಾರು ಕುಟುಂಬದ ಸದಸ್ಯರು ಸ್ಥಳದಲ್ಲೇ ಉಪಸ್ಥಿತರಿದ್ದು, ಈ ಭೀಕರ ಅಪಘಾತವನ್ನು ಕಣ್ಣಾರೆ ಕಂಡು ಕಂಗೆಟ್ಟಿದ್ದಾರೆ. ಕಣ್ಣೆದುರೇ ಪ್ರೀತಿಪಾತ್ರರನ್ನು ಕಳೆದುಕೊಂಡು ಆಘಾತಕ್ಕೊಳಗಾಗಿರುವ ಕುಟುಂಬದ ಸದಸ್ಯರಿಗೆ ನೆರವು ಹಾಗೂ ಧೈರ್ಯ ತುಂಬಲು ಸ್ಥಳೀಯ ಅಧಿಕಾರಿಗಳು ತಕ್ಷಣವೇ ವೈದ್ಯಕೀಯ ಮತ್ತು ಮಾನಸಿಕ ಸಹಾಯ ಕೇಂದ್ರವನ್ನು ಸ್ಥಾಪಿಸಿದ್ದಾರೆ. ದುರಂತದ ತೀವ್ರತೆಗೆ ಸಾಕ್ಷಿಯಾದ ಕುಟುಂಬಸ್ಥರಿಗೆ ಆಪ್ತಸಮಾಲೋಚನೆ ಒದಗಿಸಲಾಗುತ್ತಿದೆ.

​ಮೆರ್ಥ್-ಎಟ್-ಮೊಸೆಲ್ಲೆ ಪ್ರಾಂತ್ಯದ ಪ್ರಿಫೆಕ್ಟ್ ಯ್ವೆಸ್ ಸೆಗುಯ್ ಅವರ ಪ್ರಕಾರ, ಸ್ಕೈಡೈವಿಂಗ್ ಕ್ಲಬ್‌ಗೆ ಸೇರಿದ ಈ ವಿಮಾನವು ಹಠಾತ್ ನಿಯಂತ್ರಣ ತಪ್ಪಿ ನೇರವಾಗಿ ನೆಲಕ್ಕೆ ಅಪ್ಪಳಿಸಿದೆ. ಪೈಲಟ್ ತುರ್ತು ಭೂಸ್ಪರ್ಶಕ್ಕೆ ಪ್ರಯತ್ನಿಸಿದ ಯಾವುದೇ ಸುಳಿವುಗಳು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿಲ್ಲ. ವಿಮಾನವು ಜನವಸತಿ ಪ್ರದೇಶದ ಅತ್ಯಂತ ಸಮೀಪದಲ್ಲೇ ಪತನಗೊಂಡಿದ್ದರೂ, ಅದೃಷ್ಟವಶಾತ್ ಆ ಪ್ರದೇಶದಲ್ಲಿದ್ದ ಸಾರ್ವಜನಿಕರಿಗೆ ಯಾವುದೇ ರೀತಿಯ ಪ್ರಾಣಾಪಾಯ ಅಥವಾ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft