ಹೆಚ್ಚಿನ ಹಣ ಪೀಕುತ್ತಿದ್ದ ಆ್ಯಂಬುಲೆನ್ಸ್ ಸಂಸ್ಥೆಗಳಿಗೆ ಸರ್ಕಾರ ಮೂಗುದಾರ ಹಾಕಲು ಮುಂದಾಗಿದೆ. ಕೆಪಿಎಂಇ ಕಾಯ್ದೆ ಅಡಿಯಲ್ಲಿ ಆ್ಯಂಬುಲೆನ್ಸ್ ಸಂಸ್ಥೆಗಳನ್ನು ತರಲು ಕರ್ನಾಟಕ ಸರ್ಕಾರ ಮುಂದಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ರಾಜ್ಯದ ಕೆಲವು ಭಾಗಗಳಲ್ಲಿ ಆ್ಯಂಬುಲೆನ್ಸ್ ಹೆಚ್ಚಿನ ದರ ವಿಧಿಸುತ್ತಿವೆ ಎಂಬ ದೂರು ಇದೆ. ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಸಚಿವರು.. ಕೆಪಿಎಂಇ (Karnataka Private Medical Establishment Act) ಅಡಿಯಲ್ಲಿ ಆ್ಯಂಬುಲೆನ್ಸ್ಗಳನ್ನು ಸರ್ಕಾರದಡಿಯಲ್ಲಿ ತರುತ್ತಿದ್ದೇವೆ
ಬರುವ ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಲಿದೆ. ಆ್ಯಂಬುಲೆನ್ಸ್ ಹೇಗಿರಬೇಕು, ಮಾನದಂಡ ಹೇಗಿರಬೇಕು. ಜೊತೆಗೆ ದರವನ್ನು ಹೇಗೆ ನಿಯಂತ್ರಣ ಮಾಡಬೇಕು ಅನ್ನೋದ್ರ ಕುರಿತು ಚರ್ಚೆ ನಡೆಸಿ ನಿಯಮ ಜಾರಿಗೆ ತರುತ್ತವೆ. ಮೊಬೈಲ್ ಹೆಲ್ತ್ ಯುನಿಟ್ಗಳು, ಆ್ಯಂಬುಲೆನ್ಸ್ಗಳಿಗೆ ಕೆಪಿಎಂಇ ಲೈಸೆನ್ಸ್ ಕಡ್ಡಾಯ ಮಾಡುತ್ತೇವೆ.
ಓಲಾ, ಊಬರ್ ಆ್ಯಪ್ಗಳ ರೀತಿಯಲ್ಲೇ ಆ್ಯಂಬುಲೆನ್ಸ್ಗಳನ್ನು ಬುಕ್ ಮಾಡಬಹುದು. ಸರ್ವೀಸ್ ಯಾರೇ ಕೊಡಲಿ ದರ ಮೊದಲೇ ಫಿಕ್ಸ್ ಮಾಡುತಿದ್ದೇವೆ, ಪಾರದರ್ಶಕತೆ ತರುತಿದ್ದೇವೆ. ಆ್ಯಂಬುಲೆನ್ಸ್ಗಳು ಕ್ವಾಲಿಟಿ ಇರುವುದಿಲ್ಲ. ಅದರಲ್ಲಿ ಬರೀ ಗಾಡಿ ಇರುತ್ತದೆ, ಒಂದು ಬೆಡ್ ಮಾತ್ರ ಇರುತ್ತವೆ. ಹೀಗಾಗಿಯೇ ಆ್ಯಂಬುಲೆನ್ಸ್ಗಳಿಗೆ ಮಾನದಂಡ ತರುತ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.




