Health +

ಓಲಾ, ಊಬರ್ ಮಾದರಿಯಲ್ಲೇ Ambulance ಬುಕಿಂಗ್ ವ್ಯವಸ್ಥೆ – ಸರ್ಕಾರದಿಂದ ಮಹತ್ವದ ನಿರ್ಧಾರ

ಹೆಚ್ಚಿನ ಹಣ ಪೀಕುತ್ತಿದ್ದ ಆ್ಯಂಬುಲೆನ್ಸ್ ಸಂಸ್ಥೆಗಳಿಗೆ ಸರ್ಕಾರ ಮೂಗುದಾರ ಹಾಕಲು ಮುಂದಾಗಿದೆ. ಕೆಪಿಎಂಇ ಕಾಯ್ದೆ ಅಡಿಯಲ್ಲಿ ಆ್ಯಂಬುಲೆನ್ಸ್ ಸಂಸ್ಥೆಗಳನ್ನು ತರಲು ಕರ್ನಾಟಕ ಸರ್ಕಾರ ಮುಂದಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ರಾಜ್ಯದ ಕೆಲವು ಭಾಗಗಳಲ್ಲಿ ಆ್ಯಂಬುಲೆನ್ಸ್​ ಹೆಚ್ಚಿನ ದರ ವಿಧಿಸುತ್ತಿವೆ ಎಂಬ ದೂರು ಇದೆ. ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಸಚಿವರು.. ಕೆಪಿಎಂಇ (Karnataka Private Medical Establishment Act) ಅಡಿಯಲ್ಲಿ ಆ್ಯಂಬುಲೆನ್ಸ್​ಗಳನ್ನು ಸರ್ಕಾರದಡಿಯಲ್ಲಿ ತರುತ್ತಿದ್ದೇವೆ

ಬರುವ ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಲಿದೆ. ಆ್ಯಂಬುಲೆನ್ಸ್​ ಹೇಗಿರಬೇಕು, ಮಾನದಂಡ ಹೇಗಿರಬೇಕು. ಜೊತೆಗೆ ದರವನ್ನು ಹೇಗೆ ನಿಯಂತ್ರಣ ಮಾಡಬೇಕು ಅನ್ನೋದ್ರ ಕುರಿತು ಚರ್ಚೆ ನಡೆಸಿ ನಿಯಮ ಜಾರಿಗೆ ತರುತ್ತವೆ. ಮೊಬೈಲ್ ಹೆಲ್ತ್ ಯುನಿಟ್​ಗಳು, ಆ್ಯಂಬುಲೆನ್ಸ್​ಗಳಿಗೆ ಕೆಪಿಎಂಇ ಲೈಸೆನ್ಸ್ ಕಡ್ಡಾಯ ಮಾಡುತ್ತೇವೆ. 

ಓಲಾ, ಊಬರ್ ಆ್ಯಪ್​ಗಳ ರೀತಿಯಲ್ಲೇ ಆ್ಯಂಬುಲೆನ್ಸ್​ಗಳನ್ನು ಬುಕ್ ಮಾಡಬಹುದು. ಸರ್ವೀಸ್  ಯಾರೇ ಕೊಡಲಿ ದರ ಮೊದಲೇ ಫಿಕ್ಸ್ ಮಾಡುತಿದ್ದೇವೆ, ಪಾರದರ್ಶಕತೆ ತರುತಿದ್ದೇವೆ. ಆ್ಯಂಬುಲೆನ್ಸ್​​ಗಳು ಕ್ವಾಲಿಟಿ ಇರುವುದಿಲ್ಲ. ಅದರಲ್ಲಿ ಬರೀ ಗಾಡಿ ಇರುತ್ತದೆ, ಒಂದು ಬೆಡ್ ಮಾತ್ರ ಇರುತ್ತವೆ. ಹೀಗಾಗಿಯೇ ಆ್ಯಂಬುಲೆನ್ಸ್​ಗಳಿಗೆ ಮಾನದಂಡ ತರುತ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

Irshad

About Author

Leave a Reply

Your email address will not be published. Required fields are marked *

Get Latest Updates and big deals

    Our expertise, as well as our passion for web design, sets us apart from other agencies.

    Dream Times @2025. All Rights Reserved. Powered By Exalt Techsoft