News

ಬೆಂಗಳೂರಿನಲ್ಲಿ ಲಕ್ಷುರಿ ಮನೆ, ಪ್ಲ್ಯಾಟ್ ಗಳ ಮಾರಾಟದಲ್ಲಿ ಭಾರಿ ಕುಸಿತ, ಕಾರಣವೇನು ಗೊತ್ತಾ?

ಬೆಂಗಳೂರಿನಲ್ಲಿ ಲಕ್ಷುರಿ ಮನೆ, ಪ್ಲ್ಯಾಟ್ ಗಳ ಮಾರಾಟದಲ್ಲಿ ಭಾರಿ ಕುಸಿತ, ಕಾರಣವೇನು ಗೊತ್ತಾ?
ದೇಶದ ಐಟಿ ರಾಜಧಾನಿ ಬೆಂಗಳೂರಿನಲ್ಲಿ ಲಕ್ಷುರಿ ಮನೆ, ಪ್ಲ್ಯಾಟ್ ಗಳ ಮಾರಾಟದಲ್ಲಿ ಕುಸಿತವಾಗಿದೆ. ದೇಶದ ಟಾಪ್ 7 ನಗರಗಳಲ್ಲಿ ಲಕ್ಷುರಿ ಮನೆ, ಪ್ಲ್ಯಾಟ್ ಮಾರಾಟದಲ್ಲಿ ಏರಿಕೆಯಾಗುತ್ತಿದೆ. ಆದರೇ, ಬೆಂಗಳೂರಿನಲ್ಲಿ ಮಾತ್ರ ಕುಸಿತವಾಗುತ್ತಿದೆ. ಇದಕ್ಕೆ ಕಾರಣವೇನು ಗೊತ್ತಾ? ಜನಕ್ಕೆ ಎಂಥಾ ಮನೆಗಳು ಬೇಕು ಗೊತ್ತಾ?

ದೇಶದ ಐ.ಟಿ. ರಾಜಧಾನಿ ಬೆಂಗಳೂರಿನಲ್ಲಿ ದೇಶದಲ್ಲಿ ಅತಿ ಹೆಚ್ಚಿನ ಶ್ರೀಮಂತರು ವಾಸ ಮಾಡುತ್ತಿದ್ದಾರೆ. ಹಾಗಾಗಿ ಬೆಂಗಳೂರಿನಲ್ಲಿ ಐಷಾರಾಮಿ ಮನೆ, ಪ್ಲ್ಯಾಟ್ ಗಳಿಗೆ ಡಿಮ್ಯಾಂಡ್ ಜಾಸ್ತಿ ಇರಬೇಕು. ಆದರೇ, ಅಚ್ಚರಿ ಅಂದರೇ, ದೇಶದ ಉಳಿದ ಟಾಪ್ 7 ನಗರಗಳಿಗೆ ಹೋಲಿಸಿದರೇ, ಬೆಂಗಳೂರಿನಲ್ಲಿ ಲಕ್ಷುರಿ ಮನೆ, ಪ್ಲ್ಯಾಟ್ , ವಿಲ್ಲಾಗಳ ಬೇಡಿಕೆಯಲ್ಲಿ ಕುಸಿತವಾಗಿದೆ.
ದೇಶದ ಐಟಿ ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ 2024 ರಲ್ಲಿ 4 ಕೋಟಿ ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ಐಷಾರಾಮಿ ಮನೆ, ಪ್ಲ್ಯಾಟ್ ಮಾರಾಟದಲ್ಲಿ ಶೇ. 81 ರಷ್ಟು ಕುಸಿತ ಕಂಡುಬಂದಿದೆ ಎಂದು CBRE ವರದಿ ಹೇಳಿದೆ.
ಬೆಂಗಳೂರಿನಲ್ಲಿ 2023 ರಲ್ಲಿ ₹4 ಕೋಟಿಗಿಂತ ಹೆಚ್ಚು ಮೌಲ್ಯದ ಮನೆ, ಪ್ಲ್ಯಾಟ್ ಗಳು ಕೇವಲ 50 ಮಾತ್ರ ಮಾರಾಟವಾಗಿದ್ದವು , 2022 ರಲ್ಲಿ 265 ಯೂನಿಟ್‌ಗಳು ಮಾರಾಟವಾಗಿದ್ದವು. 2022 ಕ್ಕೆ ಹೋಲಿಸಿದರೇ, 2023 ರಲ್ಲಿ ಕೇವಲ 50 ಲಕ್ಷುರಿ ಮನೆ, ಪ್ಲ್ಯಾಟ್ ಗಳು ಮಾರಾಟವಾಗಿರುವುದು, ತೀರಾ ಕಡಿಮೆಯಾಗಿದೆ ಎಂದು ವರದಿ ಹೇಳಿದೆ. ದೇಶದ ಟಾಪ್ 7 ನಗರಗಳಲ್ಲಿ 2023 ರಲ್ಲಿ 12,895 ಯೂನಿಟ್‌ಗಳು ಮಾರಾಟವಾಗಿದ್ದರೇ, 2024 ರಲ್ಲಿ 19,700 ಯೂನಿಟ್‌ಗಳು ಮಾರಾಟವಾಗಿದ್ದವು. ಈ ಮೂಲದ ದೇಶದ ಟಾಪ್ 7 ನಗರಗಳಲ್ಲಿ ವಾರ್ಷಿಕ ಮಾರಾಟದಲ್ಲಿ ಶೇ. 53 ರಷ್ಟು ಬೆಳವಣಿಗೆಯನ್ನು ಕಂಡಿತ್ತು. ಕುತೂಹಲಕಾರಿ ಅಂಶವೆಂದರೇ, 2024 ರ ಮೊದಲಾರ್ಧಕ್ಕೆ ಹೋಲಿಸಿದರೆ ಬೆಂಗಳೂರು ಐಷಾರಾಮಿ ವಸತಿ ಮಾರಾಟ ಕುಸಿತವನ್ನು ಮುಂದುವರಿಸಿದ ಏಕೈಕ ನಗರವಾಗಿದೆ.
ರಿಯಲ್ ಎಸ್ಟೇಟ್ ಕನ್ಸಲ್ಟೆಂಟ್ ಗಳ ಪ್ರಕಾರ, ಜನವರಿ-ಜೂನ್ 2024 ರ ಅವಧಿಯಲ್ಲಿ ಬೆಂಗಳೂರಿನಲ್ಲಿ ₹4 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ಕೇವಲ 10 ಐಷಾರಾಮಿ ವಸತಿ ಯೂನಿಟ್ ಗಳಗಳು ಮಾರಾಟವಾಗಿವೆ. ಇನ್ನೂ ಕಳೆದ ವರ್ಷ ಇದೇ ಅವಧಿಯಲ್ಲಿ 200 ಯೂನಿಟ್‌ಗಳು ಮಾರಾಟವಾಗಿದ್ದವು.
ಬೆಂಗಳೂರಿನಲ್ಲಿ ಐಷಾರಾಮಿ ವಸತಿ ಪ್ಲ್ಯಾಟ್ ಮತ್ತು ಮನೆಗಳು ನಿರ್ಮಾಣ ಕುಸಿಯಲು
ಆದರೂ ಬೆಂಗಳೂರಿನಲ್ಲಿ ಐಷಾರಾಮಿ ವಸತಿಗಳಿಗೆ ಬೇಡಿಕೆ ಸ್ಥಿರವಾಗಿ ಉಳಿದಿದೆ. ನಗರದಲ್ಲಿ ಹೈ ನೆಟ್ ವರ್ತ್ ಇಂಡಿವಿಜ್ಯೂಯಲ್ ಗಳು (HNI ಗಳು), ಹಿರಿಯ ಕಾರ್ಯನಿರ್ವಾಹಕರು ಮತ್ತು ವಿಶೇಷ, ಉತ್ತಮ ಗುಣಮಟ್ಟದ ವಾಸಸ್ಥಳಗಳನ್ನು ಬಯಸುವ ವಲಸಿಗರ ಬರುತ್ತಿರುವುದರಿಂದ ಲಕ್ಷುರಿ ಮನೆಗಳ ನಿರ್ಮಾಣ ಮತ್ತು ಖರೀದಿ ಮುಂದುವರಿಯುತ್ತದೆ” ಎಂದು ಸಿಬಿಆರ್‌ಇ ನ ಅಧ್ಯಕ್ಷ ಮತ್ತು ಸಿಇಒ ಅಂಶುಮಾನ್ ಮ್ಯಾಗಜೀನ್ ಹೇಳಿದ್ದಾರೆ.
ಐಷಾರಾಮಿ ಮನೆ, ಪ್ಲ್ಯಾಟ್ ಗಳ ಮಾರಾಟದ ಬಗ್ಗೆ ವಿಚಾರಿಸುವವರ ಸಂಖ್ಯೆಯೂ ಕುಸಿದಿರುವುದಾಗಿ ಸ್ಥಳೀಯ ದಲ್ಲಾಳಿಗಳು ಹೇಳುತ್ತಾರೆ. “ಕಳೆದ ವರ್ಷಕ್ಕೆ ಹೋಲಿಸಿದರೆ ಐಷಾರಾಮಿ ಘಟಕಗಳ ಬಗ್ಗೆ ವಿಚಾರಿಸುವವರ ಸಂಖ್ಯೆಯಲ್ಲಿ ಕನಿಷ್ಠ 20% ಕುಸಿತವನ್ನು ನಾವು ಕಂಡಿದ್ದೇವೆ. ಇದು ಐಷಾರಾಮಿ ಮನೆ, ಪ್ಲ್ಯಾಟ್ ಗಳ ಬೃಹತ್ ಪೂರೈಕೆಗೂ ಕಾರಣವೆಂದು ಹೇಳಬಹುದು. ಆದಾರೂ ಬೇಡಿಕೆ ಹಾಗೆಯೇ ಉಳಿದಿದೆ” ಎಂದು ಹನು ರೆಡ್ಡಿ ರಿಯಾಲ್ಟಿಯ ಉಪಾಧ್ಯಕ್ಷ ಕಿರಣ್ ಕುಮಾರ್ ಹೇಳಿದ್ದಾರೆ.
ಸಾಮಾನ್ಯವಾಗಿ ರಿಯಲ್ ಎಸ್ಟೇಟ್ ನಲ್ಲಿ 4 ಕೋಟಿ ರೂಪಾಯಿ ಹಾಗೂ ಅದಕ್ಕಿಂತೆ ಹೆಚ್ಚಿನ ಬೆಲೆಯ ಮನೆ, ಪ್ಲ್ಯಾಟ್ ಗಳನ್ನು ಲಕ್ಷುರಿ ಮನೆಗಳು ಎಂದು ವರ್ಗಿಕರೀಸಲಾಗುತ್ತೆ. ಬೆಂಗಳೂರಿನ ಪ್ರೈಮ್ ಲೋಕೇಷನ್ ಗಳಾದ ಕೋರಮಂಗಲ, ವೈಟ್ ಫೀಲ್ಡ್, ಸದಾಶಿವನಗರ, ಉತ್ತರ ಬೆಂಗಳೂರಿನಲ್ಲಿ ಲಕ್ಷುರಿ ಮನೆ, ಪ್ಲ್ಯಾಟ್ ಗಳು ನಿರ್ಮಾಣವಾಗುತ್ತಿವೆ. ಏರಿಯಾಗಳೇ ಲಕ್ಷುರಿ ಮನೆ, ಪ್ಲ್ಯಾಟ್ ಖರೀದಿ ಮಾಡುವವರನ್ನು ಆಕರ್ಷಿಸುತ್ತಿವೆ. ಸೆಂಟ್ರಲ್ ಬೆಂಗಳೂರಿನ ಬ್ಯುಸಿನೆಸ್ ಡಿಸ್ಟ್ರಿಕ್ ಗೆ ಹತ್ತಿರವಿರುವುದು ಮತ್ತು ಪ್ರೀಮಿಯಂ ಲೈಫ್ ಸ್ಟೈಲ್ ಈ ಪ್ರದೇಶಗಳಲ್ಲೇ ಇರುವುದರಿಂದ ಐಷಾರಾಮಿ ಮನೆ, ಪ್ಲ್ಯಾಟ್ ಗಳು ಈ ಭಾಗದಲ್ಲೇ ಹೆಚ್ಚಾಗಿ ನಿರ್ಮಾಣವಾಗುತ್ತಿವೆ.
ಇನ್ನೂ ಪ್ರೀಮಿಯಂ ಮನೆ, ಪ್ಲ್ಯಾಟ್ ಗಳು ಹೆಚ್ಚಾಗಿ 2 ಕೋಟಿ ರೂಪಾಯಿಯಿಂದ 4 ಕೋಟಿ ರೂಪಾಯಿ ಮೌಲ್ಯದವರೆಗೂ ಇವೆ. ಜೆ.ಪಿ.ನಗರ, ದಕ್ಷಿಣ ಬೆಂಗಳೂರು, ಔಟರ್ ರಿಂಗ್ ರೋಡ್ ಭಾಗದಲ್ಲಿ ಪ್ರೀಮಿಯಂ ಮನೆ, ಪ್ಲ್ಯಾಟ್ ಗಳು ನಿರ್ಮಾಣವಾಗುತ್ತಿವೆ. ಈ ಪ್ರದೇಶಗಳು ಜನರಿಗೆ ಅಫರ್ಡಬಲ್ ಮತ್ತು ಒಳ್ಳೆಯ ಕನೆಕ್ಟಿವಿಟಿ ಕಾರಣದಿಂದ ಈ ಪ್ರದೇಶಗಳನ್ನು ಜನರು ಇಷ್ಟಪಡುತ್ತಿದ್ದಾರೆ.
ಬೆಂಗಳೂರಿನಲ್ಲಿ ಈಗ ಬಜೆಟ್ ಮನೆಗಳೆಂದರೇ, 1 ಕೋಟಿ ರೂಪಾಯಿಯಿಂದ 2.5 ಕೋಟಿ ರೂಪಾಯಿವರೆಗಿನ ಮನೆ, ಪ್ಲ್ಯಾಟ್ ಗಳು. ಈ ಬಜೆಟ್ ಮನೆಗಳನ್ನು ಮಧ್ಯಮ ವರ್ಗ, ಮೇಲ್ ಮಧ್ಯಮ ವರ್ಗದ ಜನರು ಖರೀದಿಸುತ್ತಿದ್ದಾರೆ. ಬಜೆಟ್ ಮನೆ, ಪ್ಲ್ಯಾಟ್ ಗಳಿಗೆ ಬೆಂಗಳೂರಿನಲ್ಲಿ ಹೆಚ್ಚಿನ ಬೇಡಿಕೆ ಇದೆ. ಜನರು ಇವುಗಳ ಬಗ್ಗೆ ಹೆಚ್ಚಾಗಿ ರಿಯಲ್ ಎಸ್ಟೇಟ್ ಬಿಲ್ಡರ್, ಡೆವಲಪರ್ ಗಳ ಬಳಿ ವಿಚಾರಿಸುತ್ತಿದ್ದಾರೆ

admin

About Author

Leave a Reply

Your email address will not be published. Required fields are marked *

Get Latest Updates and big deals

    Our expertise, as well as our passion for web design, sets us apart from other agencies.

    Dream Times @2025. All Rights Reserved. Powered By Exalt Techsoft