
ಭಾರಿ ಇಳಿಕೆ ಕಂಡ ಟಾಟಾ ಪಂಚ್, ಮಾರುತಿ ಫ್ರಾಂಕ್ಸ್ ಸೇರಿ ಸಣ್ಣ ಕಾರು ಬೆಲೆ, ಜೊತೆಗೆ ಹಬ್ಬದ ಆಫರ್, ಗ್ರಾಹಕರ ಸಂಭ್ರಮಕ್ಕೆ ಕಾರಣವಾಗಿದೆ. ಜಿಎಸ್‌ಟಿ ಪರಿಷ್ಕರಣೆಯಿಂದ ಸಣ್ಣ ಕಾರುಗಳ ಬೆಲೆ ಭಾರಿ ಇಳಿಕೆಯಾಗಿದೆ. ಜೊತೆಗೆ ಹಬ್ಬದ ಆಫರ್ ಕೂಡ ಇದೆ. ಹೀಗಾಗಿ ಖರೀದಿಗೆ ಇದೂ ಸೂಕ್ತ ಸಮಯವಾಗಿದೆ.
ಪರಿಷ್ಕೃತ ಜಿಎಸ್‌ಟಿ ನೀತಿ
ಟಾಟಾ ಪಂಚ್, ಮಾರುತಿ ಸುಜುಕಿ ಫ್ರಾಂಕ್ಸ್, ಹ್ಯುಂಡೈ
ಪರಿಷ್ಕೃತ ಜಿಎಸ್‌ಟಿ ನೀತಿ ಜಾರಿಯಾಗಿದೆ. ಹಲವು ವಸ್ತುಗಳ ಬೆಲೆ ಕಡಿಮೆಯಾಗಿದೆ. ಜಿಎಸ್‌ಟಿ ಇಳಿಕೆಯಿಂದ ಸಹಜವಾಗಿ ಬೆಲೆ ಇಳಿಕೆಯಾಗಿದೆ. ಬಜೆಟ್ ಫ್ರೆಂಡ್ಲಿ ಸಣ್ಣ ಕಾರುಗಳ ಖರೀದಿಸಲು ಬಯಸುವ ಮಧ್ಯಮ ವರ್ಗದ ಕುಟುಂಬಕ್ಕೆ ಇದು ವರದಾನವಾಗಿದೆ. ಪ್ರಮುಖವಾಗಿ ಟಾಟಾ ಪಂಚ್, ಮಾರುತಿ ಸುಜುಕಿ ಫ್ರಾಂಕ್ಸ್, ಹ್ಯುಂಡೈ ಎಕ್ಸ್‌ಟರ್ ಸೇರಿದಂತೆ ಸಣ್ಣ ಎಸ್‌ಯುವಿ ಕಾರುಗಳ ಬೆಲೆ ಭಾರಿ ಇಳಿಕೆಯಾಗಿದೆ.
ಫ್ರಾಂಕ್ಸ್ ಬೆಲೆ ಗರಿಷ್ಠ 1,12,000 ರೂಪಾಯಿ ಇಳಿಕೆ
ಮಾರುತಿ ಸುಜುಕಿ ಫ್ರಾಂಕ್ಸ್
ಮಾರುತಿ ಸುಜುಕಿ ಫ್ರಾಂಕ್ಸ್ ಮಾರಾಟದಲ್ಲೂ ಉತ್ತಮ ದಾಖಲೆ ಬರೆಯುತ್ತಿದೆ. ಇದೀಗ ಮಾರುತಿ ಸುಜುಕಿ ಫ್ರಾಂಕ್ಸ್ ಕಾರಿನ ಬೆಲೆ ಮತ್ತಷ್ಟು ಇಳಿಕೆಯಾಗಿದೆ. ಜಿಎಸ್‌ಟಿ ದರ ಇಳಿಕೆಯಿಂದ ಫ್ರಾಂಕ್ಸ್ ಬೆಲೆ ಗರಿಷ್ಠ 1,12,000 ರೂಪಾಯಿ ಇಳಿಕೆಯಾಗಿದೆ. ಇದರಿಂದ ಫ್ರಾಂಕ್ಸ್ ಅಗ್ಗದ ಕಾರಾಗಿ ಹೊರಹೊಮ್ಮಿದೆ.
ಟಾಟಾ ಪಂಚ್ ಕಾರಿನ ಬೆಲೆ
ಟಾಟಾ ಪಂಚ್ ಇದೀಗ ಕೈಗೆಟುಕುವ ಕಾರಾಗಿದೆ
ಟಾಟಾ ಪಂಚ್ ಕಾರಿನ ಬೆಲೆಯಲ್ಲೂ ಭಾರಿ ಇಳಿಕೆಯಾಗಿದೆ. ಬೇಸಿಕ್ ಮಾಡೆಲ್ ಕಾರಿನಲ್ಲೇ ಟಾಟಾ ಪಂಚ್ ಮೇಲೆ ಬರೋಬ್ಬರಿ 85,000 ರೂಪಾಯಿ ಇಳಿಕೆಯಾಗಿದೆ. ಇದರಿಂದ ಭಾರಿ ಮಾರಾಟದ ಮೂಲಕ ಮುಂಚೂಣಿಯಲ್ಲಿದ್ದ ಟಾಟಾ ಪಂಚ್ ಇದೀಗ ಕೈಗೆಟುಕುವ ಕಾರಾಗಿದೆ.
ಜಿಎಸ್‌ಟಿ ಪರಿಷ್ಕರಣೆಯಿಂದ ಸಣ್ಣ ಎಸ್‌ಯುವಿ ಕಾರುಗಳ ದರ ಇಳಿಕೆ
ಸಣ್ಣ ಎಸ್‌ಯುವಿ ಕಾರುಗಳ ದರ ಇಳಿಕೆ
ಟಾಟಾ ಪಂಚ್ : 85,000 ರೂಪಾಯಿ
ಮಾರುತಿ ಸುಜುಕಿ ಫ್ರಾಂಕ್ಸ್ : ಗರಿಷ್ಠ 1,12,000 ರೂಪಾಯಿ
ಹ್ಯುಂಡೈ ಎಕ್ಸ್‌ಟರ್ : 89,209 ರೂಪಾಯಿ
ಮಾರುತಿ ಇಗ್ನಿಸ್ : 71,300 ರೂಪಾಯಿ
ಕಿಯಾ ಸೈರೋಸ್ : 1.86 ಲಕ್ಷ ರೂಪಾಯಿ
ಕಿಯಾ ಸೊನೆಟ್ : 1.64 ಲಕ್ಷ ರೂಪಾಯಿ ಇಳಿಕೆ
ನಿಸಾನ್ ಮ್ಯಾಗ್ನೈಟ್ ಎಸ್‌ಯುವಿ
1,00,400 ರೂಪಾಯಿ ಕಡಿತ
ನಿಸಾನ್ ಮ್ಯಾಗ್ನೈಟ್ ಎಸ್‌ಯುವಿ ಕಾರು ಇದೀಗ 6 ಲಕ್ಷ ರೂಪಾಯಿ ಒಳಗೆ ಲಭ್ಯವಿದೆ. ಮ್ಯಾಗ್ನೈಟ್ ಸಿವಿಟಿ ( ಆಟೋಮ್ಯಾಟಿಕ್) ಕಾರಿಗೆ ಗರಿಷ್ಠ 1,00,400 ರೂಪಾಯಿ ಕಡಿತಗೊಂಡಿದೆ. ಇದರಿಂದ ನಿಸಾನ್ ಮ್ಯಾಗೈಟ್ ಎಸ್‌ಯುವಿ ಕಾರು ಭಾರತದಲ್ಲಿ ಲಭ್ಯವಿರುವ ಅತೀ ಕಡಿಮೆ ಬೆಲೆಯ ಎಸ್‌ಯುವಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.



