ಸದ್ಯ ನಾಡಿನಾದ್ಯಂತ ಹಬ್ಬದ ಕಲರವ ಇದ್ದರೇ ಇತ್ತ ಕಾಂತಾರ ಸಿನಿಮಾ ತಂಡದವರು ಚಾಪ್ಟರ್- 1 ರಲ್ಲಿ ಹೀರೋಯಿನ್ ಅವರ ಪಾತ್ರ ಪರಿಚಯ ಮಾಡಿದ್ದಾರೆ. ಈ ಬಗ್ಗೆ ಮೊದಲು ಪೋಸ್ಟರ್ ಕೂಡ ಹಂಚಿಕೊಂಡಿದ್ದಾರೆ.

‘ಕಾಂತಾರ’ ಚಿತ್ರಕ್ಕೆ ಸಪ್ತಮಿ ಗೌಡ ನಾಯಕಿ ಆಗಿದ್ದರು. ಈ ಚಿತ್ರದ ಮೂಲಕ ಅವರಿಗೆ ಬೇಡಿಕೆ ಹೆಚ್ಚಿತು. ಈ ಚಿತ್ರದ ಪ್ರೀಕ್ವೆಲ್ ‘ಕಾಂತಾರ: ಚಾಪ್ಟರ್ 1’ (Kantara: Chapter 1) ಸಿನಿಮಾಗೆ ನಾಯಕಿ ಯಾರು ಎಂಬ ವಿಚಾರ ಈವರೆಗೆ ರಿವೀಲ್ ಆಗಿರಲಿಲ್ಲ. ಈಗ ಈ ವಿಷಯದ ಬಗ್ಗೆ ತಂಡದಿಂದ ಅಧಿಕೃತ ಅಪ್ಡೇಟ್ ಸಿಕ್ಕಿದೆ. ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಕನಕವತಿ ಪಾತ್ರದ ಪೋಸ್ಟರ್ ರಿಲೀಸ್ ಆಗಿದೆ. ಈ ಪಾತ್ರದಲ್ಲಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ.
‘ಕಾಂತಾರ: ಚಾಪ್ಟರ್ 1’ ರಿಲೀಸ್ಗೆ ಇನ್ನು ಕೆಲವೇ ತಿಂಗಳು ಬಾಕಿ ಉಳಿದಿವೆ. ಹೀಗಾಗಿ, ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಪ್ರಚಾರ ಆರಂಭಿಸಲು ತಂಡ ರೆಡಿ ಆಗಿದೆ. ಇದರ ಭಾಗವಾಗಿ ಸಿನಿಮಾದ ನಾಯಕಿ ಪಾತ್ರದ ಪರಿಚಯವನ್ನು ನೀಡಲಾಗಿದೆ. ರುಕ್ಮಿಣಿ ವಸಂತ್ ಈ ಚಿತ್ರದ ನಾಯಕಿ ಎಂಬ ವಿಚಾರ ತಿಳಿದು ಅನೇಕರಿಗೆ ಖುಷಿ ಆಗಿದೆ.




